1024 ಅಕ್ರಮ ದೇಗುಲ ನೆಲಸಮಕ್ಕೆ ಮೀನಾ ಮೇಷ

ಅಕ್ರಮ ಕಟ್ಟಡಗಳು ನೆಲಸಮಗೊಳ್ಳದೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ. ಜನತೆಯ ಧಾಮೀಕ ಶಿಷ್ಟಾಚಾರಗಳಿಂದಾಗಿ ನ್ಯಾಯಾಲಯದ ಆದೇಶ ಪಾಲನೆಯ ಕಷ್ಟವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಟಿ ರೇಜು ಹೇಳಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 1,112 ಅಕ್ರಮ ಧಾರ್ಮಿಕ ಪೂಜಾ ಕೇಂದ್ರಗಳಿವೆ, ಅವುಗಳಲ್ಲಿ 182 ಕಟ್ಟಡಗಳು ಸಾರ್ವಜನಿಕ ಸ್ಥಳಗಳಲ್ಲಿವೆ. ಉಳಿದ 930 ಕಟ್ಟಡಗಳು ಇತರೆಡೆಗಳಲ್ಲಿ ತಲೆ ಎತ್ತಿದೆ. ಅಕ್ರಮ ದೇಗುಲಗಳ ಪೈಕಿ ಸುಮಾರು 88 ಕಟ್ಟಡಗಳನ್ನು ಮಾತ್ರ ಧ್ವಂಸಗೊಳಿಸಲಾಗಿದೆ. ಆದರೆ 1,024 ಕಟ್ಟಡಗಳು ಹಾಗೇ ಉಳಿದಿವೆ.
ಉಡುಪಿ ತಾಲೂಕಿನಲ್ಲಿ ನೋಟಿಸ್ ಕಳುಹಿಸಿರುವ 462 ಧಾರ್ಮಿಕ ಪೂಜಾ ಕೇಂದ್ರಗಳ ಪೈಕಿ 409 ದೇವಸ್ಥಾನಗಳು, 24 ಚರ್ಚುಗಳು ಹಾಗೂ 29 ದರ್ಗಾಗಳು ಸೇರಿವೆ. ಉಳಿದ 650 ಅಕ್ರಮ ಪೂಜಾ ಕೇಂದ್ರಗಳು ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲಿ ಕಂಡು ಬಂದಿವೆ.
ಅಕ್ರಮ ಕಟ್ಟಡಗಳ ಪಟ್ಟಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾಣ ಸಿಗುವ ಬೋರ್ಡ್, ಕಟ್ಟೆ, ಕಾಣಿಕೆ ಹುಂಡಿ, ಗೋಪುರಗಳು ಸೇರುತ್ತದೆ, ಸುಮಾರು 650ಕ್ಕೂ ಅಧಿಕ ಧಾರ್ಮಿಕ ವಸ್ತುಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದೆ.












Click it and Unblock the Notifications