ಸೋನಿಯಾ ಗಾಂಧಿ ಕ್ಯಾನ್ಸರ್ ರೋಗ ಗುಟ್ಟು ಬಚ್ಚಿಟ್ಟಿದ್ದೇಕೆ?

ನ್ಯೂಯಾರ್ಕ್ ಸ್ಲೋವನ್ ಕೆಟರಿಂಗ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಸೋನಿಯಾ ಆವರು ಇನ್ನೂ ಒಂದು ತಿಂಗಳು ಚಿಕಿತ್ಸೆ ಪಡೆಯಬೇಕು. ಅವಶ್ಯ ಬಿದ್ದರೆ ಮುಂದೆ ರೇಡಿಯೋ ಥೆರಪಿ ಪ್ರಯೋಗಿಸಬಹುದು ಎಂದು ಆಂಧ್ರಪ್ರದೇಶ ಮೂಲದ ವಿಶ್ವವಿಖ್ಯಾತ ಕ್ಯಾನ್ಸರ್ ತಜ್ಞ ಡಾ. ದತ್ತಾತ್ರೇಯುಡು ನೋರಿ ಹೇಳಿದ್ದಾರೆ.
ಸೋನಿಯಾರ ಹಳೆ ಸ್ನೇಹಿತ ಪುಲೋಕ್ ಚಟರ್ಜಿ ಅವರೇ ಆಸ್ಪತ್ರೆಯ ಸಕಲ ಕಾರುಬಾರನ್ನು ನೋಡಿಕೊಳ್ಳುತ್ತಿದ್ದಾರೆ.
ಸೋನಿಯಾಗೆ ಗರ್ಭಕೋಶದ ಕ್ಯಾನ್ಸರ್?: ಸೋನಿಯಾ ಅವರಿಗೆ ಗರ್ಭಕೋಶ (ಸರ್ವೈಕಲ್) ಕ್ಯಾನ್ಸರ್ ಆಗಿದ್ದು, ಮಾರಕ ಕಾಯಿಲೆಯನ್ನು ಮುಚ್ಚಿಟ್ಟಿದ್ದು ಏಕೆ ಎಂದು ಮಾಧ್ಯಮಗಳು ಪ್ರಶ್ನಿಸುತ್ತಿದೆ.
ಕಳೆದ 8 ತಿಂಗಳಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಕಾಂಗ್ರೆಸ್ ಮೂಲಗಳಾಗಲಿ, ಗಾಂಧಿ ಕುಟುಂಬವಾಗಲಿ ಸೋನಿಯಾಗೆ ಏನಾಗಿದೆ ಎಂಬುದನ್ನು ಎಲ್ಲೂ ಸ್ಪಷ್ಟವಾಗಿ ಹೇಳಿಲ್ಲ.
ಕ್ಯಾನ್ಸರ್ ತಗುಲಿದೆ ಎಂಬುದು ಜಗಜ್ಜಾಹೀರಾದ ನಂತರ,ಸೋನಿಯಾ ಸರ್ಜರಿ ಯಶಸ್ವಿಯಾಗಿದ್ದನ್ನು ಮಾತ್ರ ಸ್ಪಷ್ಟಪಡಿಸಲಾಗಿತ್ತು.
ಕಾಯಿಲೆ ಸ್ಥಿತಿ, ಸೋನಿಯಾರ ಆರೋಗ್ಯದ ಬಗ್ಗೆ ಅನೇಕ ಊಹಾಪೋಹಗಳು ಎದ್ದಿವೆ. ಮುಂದಿನ ದಿನಗಳಲ್ಲಿ ಸೋನಿಯಾ ಎಷ್ಟರ ಮಟ್ಟಿಗೆ ರಾಜಕೀಯದಲ್ಲಿ ಸಕ್ರಿಯರಾಗಿರುತ್ತಾರೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ದ ಟೆಲಿಗ್ರಾಫ್ ವರದಿ ಮಾಡಿದೆ.












Click it and Unblock the Notifications