ಅಣ್ಣಾ ಎಫೆಕ್ಟ್ : ಮುಂಬೈಕರ್ ಗಳಿಗೆ ಬಲವಂತ ಉಪವಾಸ

ಆದರೆ, ಇದರ ನಿಜ ಪರಿಣಾಮ ಮಾತ್ರ ಮುಂಬೈಯಲ್ಲಿ ಕಾಣಬಹುದಾಗಿದೆ. ಅಣ್ಣಾ ಅವರ ಹೋರಾಟಕ್ಕೆ ಮುಂಬೈನ ಡಬ್ಬಾವಾಲಾಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವುದು ಮುಂಬೈ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಅ.16ರಂದು ಅಣ್ಣಾ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಡಬ್ಬಾವಾಲಾಗಳ ಸಂಘ ಘೋಷಿಸಿದೆ.
ಮುಂಬೈನಲ್ಲಿ ಸುಮಾರು 2,00,000 ಜನರಿಗೆ ಮನೆಯೂಟವನ್ನು ತಲುಪಿಸುವ ಡಬ್ಬಾವಾಲಾಗಳ ನೆಟ್ವರ್ಕ್ ಕೈ ಕೊಟ್ಟರೆ ಅರ್ಧದಷ್ಟು ಮುಂಬೈ ನಿವಾಸಿಗಳು ಉಪವಾಸ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಈ ಬಗ್ಗೆ ಗ್ರಾಹಕರಿಗೆ ಮನವರಿಕೆ ಮಾಡಿಕೊಡಲಾಗುವುದು. ಬಾಬಾ ರಾಮದೇವ್ ಅವರ ಕಪ್ಪುಹಣ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಿದಂತೆ, ನಮ್ಮ ಗ್ರಾಹಕರು ಕೂಡಾ ಆ.16ರಂದು ಅಣ್ಣಾ ಅವರನ್ನು ಬೆಂಬಲಿಸಿದರೆ ಇನ್ನೂ ಒಳ್ಳೆಯದು ಎಂದು ಡಬ್ಬಾವಾಲಾಗಳು ಹೇಳಿದ್ದಾರೆ.
ಯುಪಿಎ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ಲೋಕಾಪಾಲ್ ಮಸೂದೆಯನ್ನು ತಿರಸ್ಕರಿಸಿರುವ ಅಣ್ಣಾ ಹಜಾರೆ ಹಾಗೂ ಸಂಗಡಿಗರು ಮತ್ತೆ ಉಪವಾಸ ಸತ್ಯಾಗ್ರಹ ಕೂರಲು ನಿರ್ಧರಿಸಿದ್ದಾರೆ.












Click it and Unblock the Notifications