ಡಿಸಿಎಂ ಆಗಲು ಜಗದೀಶ್ ಶೆಟ್ಟರ್ ಒಪ್ಪಿಗೆ ನೀಡಿದರೆ?

ಯಡಿಯೂರಪ್ಪ ಹಾಗೂ ಅನಂತ್ ಬಣಕ್ಕೆ ಸಮನಾಗಿ ಖಾತೆ ಹಂಚಿಕೆ ಮಾಡಿ ಸದಾನಂದ ಗೌಡರು 'ಸಮಾಹಿತ' ನಾಗಿ ಕಾಣಿಸುತ್ತಿದ್ದಾರೆ. ಸೋಮವಾರ ಶೆಟ್ಟರ್ ಬಳಗದ ಶಾಸಕರುಗಳು ಹೊಸ ಸಂಪುಟಕ್ಕೆ ಸೇರ್ಪಡೆಗೊಂಡು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಉಳಿದವರು ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಜಗದೀಶ್ ಶೆಟ್ಟರ್ ಬಣಕ್ಕೆ ಇಂಧನ, ಜಲಸಂಪನ್ಮೂಲ, ಗೃಹ ಖಾತೆ, ಲೋಕೋಪಯೋಗಿ, ಗ್ರಾಮೀಣ ಸೇರಿದಂತೆ ಪ್ರಮುಖ ಖಾತೆಗಳು ಸಿಗಲಿದೆ. ಒಟ್ಟು 14 ಜನ ಪಟ್ಟಿ ಸೇರಿದ್ದಾರೆ. ಯಾರಿಗೆ ಯಾವ ಖಾತೆ ಎಂಬುದು ನಿರ್ಧಾರವಾಗಿಲ್ಲ. ಯಡಿಯೂರಪ್ಪ ಬೆಂಬಲಿತ ಶಾಸಕರ ಸಂಖ್ಯೆ ಕೂಡಾ 14 ಮುಟ್ಟಿದೆ.
ಗೆದ್ದವರ ಮೇಲೆ ಸೋತವರ ಸವಾರಿ: ರಹಸ್ಯ ಮತದಾನದಲ್ಲಿ ಸದಾನಂದ ಗೌಡರು ಜಯ ಗಳಿಸಿದರೂ ಶೆಟ್ಟರ್ ಮುಂದೆ ಶರಣು ಹೊಡೆಯುತ್ತಿದ್ದಾರೆ. 14 ಸ್ಥಾನ ನೀಡುವ ಭರವಸೆ ನೀಡಿದರೂ ಶೆಟ್ಟರ್ ಅವರು 20 ಸ್ಥಾನ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಇದಲ್ಲದೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಮೇಲೂ ಶೆಟ್ಟರ್ ಬಳಗ ಕಣ್ಣಿಟ್ಟಿದೆ. ಯಡಿಯೂರಪ್ಪ ಬೆಂಬಲ ಪಡೆದು ಸಿಎಂ ಮಾತ್ರ ಆಗಬಹುದು. ಆದರೆ, ಮಿಕ್ಕ ರಾಜ್ಯಭಾರವೆಲ್ಲಾ ನಮ್ಮದೆ ಎಂಬಂತೆ ಶೆಟ್ಟರ್ ಬಳಗ ವರ್ತಿಸುತ್ತಿದೆ.












Click it and Unblock the Notifications