ಎಂಪಿ ಸ್ಥಾನಕ್ಕೆ ಕುಮಾರ ರಾಜೀನಾಮೆ ಕೊಡಲಿ: ರೇಣು
ಬೆಂಗಳೂರು,
ಆಗಸ್ಟ್ 5: ಲೋಕಾಯುಕ್ತರ ಅಕ್ರಮ ಗಣಿ ವರದಿಯಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮೇಲೆ ಆರೋಪವಿರುವುದರಿಂದ ಕೂಡಲೇ ಅವರು ನೈತಿಕ ಹೊಣೆಹೊತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ ಅಬಕಾರಿ ರೇಣುಕಾಚಾರ್ಯ ಹೇಳಿದ್ದಾರೆ. id="toptextpromo">ಸುದ್ದಿಗಾರರ
ಜತೆ ಮಾತನಾಡಿದ ಅವರು, ಲೋಕಾಯುಕ್ತರ ಗಣಿ ವರದಿ ಆರೋಪದ ಹಿನ್ನೆಲೆಯಲ್ಲಿ ನಮ್ಮ ವರಿಷ್ಠರ ತೀರ್ಮಾನದಂತೆ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ವರದಿಯಲ್ಲಿ ಕುಮಾರಸ್ವಾಮಿ ಮೇಲೂ ನೇರ ಆರೋಪವಿರುವುದರಿಂದ ಸಂಸದನ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಅವರು ಒತ್ತಾಯಿಸಿದರು. id='are-slot-1' class='oiad oi-axt oiadv'> id='top-searched-articles'>ಸದಾನಂದ
ಗೌಡರು ಸಿಎಂ ಆಗಿ ಮುಂದಿನ 22 ತಿಂಗಳು ಉತ್ತಮ ಆಡಳಿತ ನೀಡಲಿದ್ದಾರೆ. ಈ ಹಿಂದೆ ಯಡಿಯೂರಪ್ಪ ಮಾಡಿದ ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸುತ್ತಾರೆ. ನನಗೆ ಅಧಿಕಾರ ಬೇಕು ಎನ್ನುವ ಸ್ವಾರ್ಥವಿಲ್ಲ. ವರಿಷ್ಠರು ಯಾವುದೇ ಸ್ಥಾನ ಅಥವಾ ಕೆಲಸ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನಮ್ಮಲ್ಲಿ ಈ ಮೊದಲು ಗುಂಪುಗಳಿದ್ದದ್ದು ನಿಜ. ಕೆಲವೊಂದು ಭಿನ್ನಾಭಿಪ್ರಾಯಗಳನ್ನು ಪಕ್ಷದೊಳಗೆ ಬಗೆಹರಿಸಿಕೊಂಡು, ಸದ್ಯದಲ್ಲೇ ಎಲ್ಲರೂ ಒಗ್ಗಟ್ಟಿನಿಂದ ಮುಂದುವರಿಯುತ್ತೇವೆ ಎಂದು ರೇಣುಕಾ ಅಭಿಪ್ರಾಯಪಟ್ಟರು.











Click it and Unblock the Notifications