ನೀರಾವರಿ ಕ್ಷೇತ್ರ ನನ್ನ ಮೊದಲ ಆದ್ಯತೆ: ಸದಾನಂದ

ಯಡಿಯೂರಪ್ಪ ಅವರು ಆರಂಭಿಸಿದ ಅನೇಕ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿದೆ. ಅದನ್ನು ಮತ್ತೆ ಆರಂಭಿಸಲಾಗುವುದು. ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು. ಪ್ರಾಯಶಃ ಒಳ್ಳೆ ದಿನ ನೋಡಿ ಮುಖ್ಯಮಂತ್ರಿ ಪ್ರಮಾಣ ವಚನ ತೆಗೆದುಕೊಳ್ಳುತ್ತೇನೆ ನಂತರ ಸವಿವರವಾಗಿ ನಿಮ್ಮೊಂದಿಗೆ ಮಾತನಾಡುತ್ತೇನೆ.
ಮುಂದಿನ ಎರಡು ವರ್ಷ ಜನಪರ ಅಧಿಕಾರ ನಡೆಸುತ್ತೇನೆ. ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಹಾಗೂ ವೆಂಕಯ್ಯ ನಾಯ್ಡು ಅವರು ನೀಡಿದ ಮಾರ್ಗದರ್ಶನದಂತೆ ಮುನ್ನಡೆಸುತ್ತೇನೆ. ಜನ ಮತ್ತೆ ಬಿಜೆಪಿಯತ್ತ ತಿರುಗುವಂತೆ ಮಾಡುತ್ತೇನೆ. ಪ್ರಮಾಣವಚನ ನಂತರ ಸಂಪೂರ್ಣ ಸುದ್ದಿಗೋಷ್ಠಿ ಎಂದು ಸದಾನಂದ ಗೌಡರು ಮೆಲಕ್ಕೇದ್ದರು.
ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ, ಸಿಟಿ ರವಿ ಸೇರಿದಂತೆ ಕೆಲವು ಶಾಸಕರು ಸದಾನಂದಗೌಡರ ಪ್ರಥಮ ಸುದ್ದಿಗೋಷ್ಠಿಗೆ ಸಾಕ್ಷಿಯಾಗಿದ್ದರು. ನಂತರ ಬಿಜೆಪಿ ಶಾಸಕಾಂಗ ನಾಯಕನಾಗಿ ಆಯ್ಕೆಯಾಗಿರುವ ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದಾರೆ.











Click it and Unblock the Notifications