ರಾಜಕೀಯ ನಿರ್ಣಾಯಕ ಘಟ್ಟಕ್ಕೆ; ಕೆಲವೇ ಕ್ಷಣಗಳಲ್ಲಿ ನೂತನ ಸಿಎಂ ಆಯ್ಕೆ

Karnataka BJP legislatures to elect new CM
ಬೆಂಗಳೂರು, ಆಗಸ್ಟ್ 03: ಇನ್ನೇನು ಕೆಲವೇ ಕ್ಷಣಗಳಲ್ಲಿ ನಾಡಿನ ನೂತನ ಮುಖ್ಯಮಂತ್ರಿ ಆಯ್ಕೆಗಾಗಿ ನಿರ್ಣಾಯಕ ಕಸರತ್ತು ಆರಂಭವಾಗಲಿದೆ. ಆಪರೇಶನ್ ಕಮಲದಿಂದ ಹುಟ್ಟುವ ಕೂಸು ಯಾರಾಗಿರಬಹುದು ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಮೂಡಿದೆ. ಬಿಜೆಪಿ ವೀಕ್ಷಕರಾದ ಅರುಣ್ ಜೇಟ್ಲಿ ಮತ್ತು ರಾಜನಾಥ ಸಿಂಗ್ ಅವರು ಹೊಸ ನಾಯಕನನ್ನು ಶತಾಯಗತಾಯ ಆಯ್ಕೆ ಮಾಡಲೇಬೇಕಾಗಿದೆ.

ಒಂದೆಡೆ ಇದು ಪಕ್ಷದ ಪ್ರತಿಷ್ಠಯಾಗಿದ್ದಾರೆ ಮತ್ತೊಂದೆಡೆ ರಾಜ್ಯಪಾಲ ಹಂಸರಾಜ್ ನೀಡಿರುವ ಡೆಡ್ ಲೈನ್. ಇಂದು ಸಂಜೆ ವೇಳೆಗೆ ಮುಂದಿನ ಸಿಎಂ ಯಾರು ಎಂಬುದನ್ನು ಘೋಷಿಸಿ. ಇಲ್ಲವಾದರೆ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ಎಂಬ ಒಂದು ಸಾಲಿನ ವರದಿಯನ್ನು ಇದು ರಾತ್ರಿಯೇ ಕೇಂದ್ರಕ್ಕೆ ಕಳಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾರೆ, ಮಹಾಪ್ರಭುಗಳು!

ಈ ಮಧ್ಯೆ ಬಿಜೆಪಿಯಲ್ಲಿನ ಅಷ್ಟೂ ಬಣಾಬಣಗಳು ಜಿದ್ದಾಜಿದ್ದಿ ಪೈಪೋಟಿಗೆ ಇಳಿದಿವೆ. ಆಡ್ವಾಣಿಯವರ ಸ್ಪಷ್ಟ ಸೂಚನೆಯ ಹೊರತಾಗಿಯೂ ವರಿಷ್ಠರಿಗೆ ಇದು ತಲೆನೋವಾಗಿದೆ. ಎರಡೂ ಬಣಗಳನ್ನು ಓಲೈಸುವ ಅನಿವಾರ್ಯತೆ ಕಾಡುತ್ತಿದೆ. ಇಲ್ಲವಾದಲ್ಲಿ ಮುಂದಿನ ಮುಖ್ಯಮಂತ್ರಿ ಹೆಸರು ಘೋಷಣೆಯಾದ ಮರುಕ್ಷಣವೇ ಭಿನ್ನಮತ ಭುಗಿಲೇಳುತ್ತದೆ. ನೂತನ ಮುಖ್ಯಮಂತ್ರಿಗೆ ಅದು ಕಂಟಕಪ್ರಾಯವಾಗುವುದು ಖಚಿತ.

ಇವರ ಗೊಡವೆಯೇ ಬೇಡ. ಮೂರನೇ ತಟಸ್ಥ ವ್ಯಕ್ತಿಯನ್ನು ಮುಂದಿನ ಮುಖ್ಯಂತ್ರಿ ಎಂದು ಘೋಷಿಸಿ, ಕೈತೊಳೆದುಕೊಂಡರಾಯಿತು ಎಂಬ ಲೆಕ್ಕಾಚಾರವೂ ವರಿಷ್ಠರಲ್ಲಿ ಮನೆಮಾಡಿರಬಹುದು. ರಹಸ್ಯ ಮತದಾನಕ್ಕೆ ಜೋತುಬೀಳುವ ಸಾಧ್ಯತೆ ಹೆಚ್ಚಾಗಿದೆ. ಇಂದು 11 ಗಂಟೆಗೆ ರಾಜಭವನದೆದುರು ಇರುವ ಹೋಟೆಲ್ ಕ್ಯಾಪಿಟಲ್ ನಲ್ಲಿ ನಡೆಯುವ ಶಾಸಕಾಂಗ ಪಕ್ಷದ ನಿರ್ಣಯ ಏನೇ ಆಗಲಿ ತಾಜಾ ಸುದ್ದಿ ನೀಡಲು 'ದಟ್ಸ್ ಕನ್ನಡ' ನಿಮ್ಮ ಸೇವೆಯಲ್ಲಿ ಸಿದ್ಧವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+