ಯಸ್, ಶ್ರೀಜಾಳನ್ನು ಹೊಡೆದು ಬಡಿದೆ: ಚಿರು ಅಳಿಮಯ್ಯ
ಹೈದರಾಬಾದ್,
ಆಗಸ್ಟ್ 2: ನಟ ಚಿರಂಜೀವಿ ಅವರ ಅಳಿಯ ಶಿರೀಶ್ ಭಾರದ್ವಾಜ್ ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪವನ್ನು ಸೋಮವಾರ ಒಪ್ಪಿಕೊಂಡಿದ್ದಾನೆ. id="toptextpromo">'ಯಸ್,
ಶ್ರೀಜಾಳನ್ನು ಹೊಡೆದು ಬಡಿದು ಮಾಡುತ್ತಿದ್ದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಶ್ರೀಜಾಳ ಮೇಲೆ ಹಲ್ಲೆ ಮಾಡಿದ್ದೇನೆ. ನಿಮ್ಮಪ್ಪ ಚಿರಂಜೀವಿಯಿಂದ ಮತ್ತಷ್ಟು ವರದಕ್ಷಿಣೆ ತಗೊಂಬಾ ಎಂದೆಲ್ಲ ಪೀಡಿಸುತ್ತಿದ್ದೆ' ಎಂದು ಶಿರೀಶ ಕೊನೆಗೂ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿರುವ ಶಿರೀಶನನ್ನು ಇನ್ಸ್‌ಪೆಕ್ಟರ್ ಜ್ಯೋತಿ ಲಕ್ಷ್ಮಿ ನೇತೃತ್ವದಲ್ಲಿ ಕೇಂದ್ರ ಅಪರಾಧ ತಂಡವು ತೀವ್ರ ವಿಚಾರಣೆ ನಡೆಸುತ್ತಿದೆ. id='are-slot-1' class='oiad oi-axt oiadv'> id='top-searched-articles'>ಶಿರೀಶನ
ಬಳಿಯಿರುವ ಶ್ರೀಜಾಳ ಚಿನ್ನಾಭರಣದ ಬಗ್ಗೆಯೂ ಪೊಲೀಸರು ವಿಚಾರಿಸುತ್ತಿದ್ದಾರೆ. ಮದುವೆಯಾದ ಹೊಸದರಲ್ಲಿ ಸುಮಾರು 50 ಲಕ್ಷ ರುಪಾಯಿ ಮೌಲ್ಯದ ಡೈಮಡ್ ನೆಕ್ಲೇಸ್ ಮತ್ತು ಗೋಲ್ಡ್ ಚೈನನ್ನು ಮಾವ ಚಿರಂಜೀವಿಯಿಂದ ಸ್ವೀಕರಿಸಿರುವುದಾಗಿ ಶಿರೀಶ ಪೊಲೀಸರಿಗೆ ಹೇಳಿದ್ದಾನೆ. 48 ಗಂಟೆಗಳ ಪೊಲೀಸ್ ಕಸ್ಟಡಿ ಮುಗಿಯುತ್ತಿದ್ದಂತೆ ಪೊಲೀಸರು ಸ್ಥಳೀಯಕೌಟುಂಬಿಕ ನ್ಯಾಯಾಲಯಕ್ಕೆ ಒಪ್ಪಿಸಿದರು. ಬಳಿಕ ಆತನನ್ನು ಚಂಚಲಗೂಡಾ ಜೈಲಿಗೆ ಕಳಿಸಲಾಯಿತು.











Click it and Unblock the Notifications