ಮಂಡ್ಯ ಆಶ್ರಮದಿಂದ 7 ಬಾಂಗ್ಲಾ ಹುಡುಗಿಯರು ಪರಾರಿ

ಕೆಲ ತಿಂಗಳ ಹಿಂದೆ ಅವರನ್ನು ರಸ್ತೆಬದಿಯ ಢಾಬಾವೊಂದರಲ್ಲಿ ಬಂಧಿಸಲಾಗಿತ್ತು. ಅವರನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ನವ ಜೀವನ ಆಶ್ರಯ ಧಾಮದಲ್ಲಿ ಇರಿಸಲಾಗಿತ್ತು.
ಮೊದಲ ಮಹಡಿಯ ಕಿಟಕಿಯ ಗ್ರಿಲ್ ಗಳನ್ನು ತೆಗೆದು, ಸೀರೆಯ ಸಹಾಯದಿಂದ ಕೆಳಗಿಳಿದು ಪರಾರಿಯಾಗಿದ್ದಾರೆ. ಪರಾರಿಯಾದವರ ಹೆಸರುಗಳು ಸಂಜನಾ ರಥಾರು, ಪಿಂಕಿ, ಸರಿತಾ, ಪನ್ನಾ, ಕಾಜಲ್, ಹಸೀನಾ ಮತ್ತು ವೀಥಾ ಎಂದು ಪೊಲೀಸರು ತಿಳಿಸಿದ್ದಾರೆ.
ಆಶ್ರಯ ಧಾಮಕ್ಕೆ ಭೇಟಿ ನೀಡಿದ ಪೊಲೀಸ್ ಸುಪರಿಂಟೆಂಡ್ ಕುಶಾಲಿಂದರ ಕುಮಾರ್ ಅವರು ತನಿಖೆ ನಡೆಸುತ್ತಿದ್ದಾರೆ. ಹುಡುಗಿಯರನ್ನು ಬಂಧಿಸಲು ವ್ಯಾಪಕ ಜಾಲ ಬೀಸಲಾಗಿದೆ. ಸದ್ಯದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications