ಮುಖ್ಯಮಂತ್ರಿಯಾಗಿ ಸುರೇಶ್ ಕುಮಾರ್ ಆಯ್ಕೆ!

ಇವರಿಬ್ಬರೂ ಅಲ್ಲ. ಅವರು 'ಮಿಸ್ಟರ್ ಕ್ಲೀನ್' ಎಂದೇ ಜನಮಾನಸದಲ್ಲಿ ಜನಪ್ರಿಯತೆ ಗಳಿಸಿರುವ ರಾಜಾಜಿನಗರದ ಶಾಸಕ ಸುರೇಶ್ ಕುಮಾರ್! ಇದು ಅಚ್ಚರಿಯಾದರೂ ಸತ್ಯ. ಆದರೆ, ಈ ಜನತಂತ್ರ ವ್ಯವಸ್ಥೆಯಲ್ಲಿ ಜನರ ಮನ್ನಣೆಗೆ, ಜನರ ಆಯ್ಕೆಗೆ ಬೆಲೆ ಎಲ್ಲಿದೆ? ಜನರ ಆಯ್ಕೆಗೆ ಬೆಲೆ ಇರುವುದು ಚುನಾವಣೆ ಘೋಷಣೆ ಆದಾಗ ಮಾತ್ರ.
ಮುಖ್ಯಮಂತ್ರಿ ಆಯ್ಕೆ ರಾಜ್ಯದಲ್ಲಿ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲು ಬಿಜೆಪಿ ವರಿಷ್ಠರು ತಡಬಡಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನ ಏನು ವಿಚಾರ ಮಾಡುತ್ತಾರೆ ಎಂಬುದನ್ನು ತಿಳಿಯಲು ದಟ್ಸ್ ಕನ್ನಡ ಒಂದು 'ಮಧ್ಯಂತರ ಚುನಾವಣೆ'ಯನ್ನು ಘೋಷಿಸಿತ್ತು.
ಮುಖ್ಯಮಂತ್ರಿಯಾಗಲು ಯಾರು ಸೂಕ್ತ ವ್ಯಕ್ತಿ ಎಂದು ಕೇಳಿ ಅನಂತ್ ಕುಮಾರ್, ಕೆಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ ಮತ್ತು ಡಿವಿ ಸದಾನಂದ ಗೌಡರನ್ನು ಕಣಕ್ಕೆ ಇಳಿಸಲಾಗಿತ್ತು. ಓದುಗರು ಕೂಡ ಅಷ್ಟೇ ಉತ್ಸಾಹದಿಂದ ಮತ ಚಲಾವಣೆ ಮಾಡಿದ್ದಾರೆ.
ಈ ಎಲ್ಲ ಧುರೀಣರ ಹಿನ್ನೆಲೆಯೇನು? ಏನೇನು ಸಾಧನೆ ಮಾಡಿದ್ದಾರೆ? ಎಷ್ಟೆಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ? ಎಷ್ಟರ ಮಟ್ಟಗೆ ಶುದ್ಧ ಹಸ್ತರಾಗಿದ್ದಾರೆ? ಎಂತೆಂಥ ಹಗರಣಗಳಲ್ಲಿ ಭಾಗಿಯಾಗಿದ್ದಾರೆ? ಎಂಬ ಎಲ್ಲ ಅಂಶಗಳನ್ನು ಅಳೆದು ತೂಗಿರುವ ನಮ್ಮ ಜಾಣ ಮತದಾರರು ವೃಶ್ಚಿಕ ರಾಶಿಯ ಎಸ್ ಸುರೇಶ್ ಕುಮಾರ್ ಅವರನ್ನು ಭಾರೀ ಬಹುಮತದಿಂದ ಜಯಶಾಲಿಯಾಗಿಸಿದ್ದಾರೆ. [ಯಾರ್ಯಾರಿಗೆ ಎಷ್ಟೆಷ್ಟು ಮತ?]
ಒಟ್ಟು 4401 ಮತಗಳು ಬಿದ್ದಿವೆ. ಅವುಗಳಲ್ಲಿ 1503 ಮತಗಳಿಸಿರುವ ಸುರೇಶ್ ಕುಮಾರ್ ಓದುಗರ ನೆಚ್ಚಿನ ನಾಯಕನಾಗಿ ಆಯ್ಕೆಯಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಸದಾನಂದ ಗೌಡ 1,234 ಮತಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ಕೊನೆ ಸ್ಥಾನದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದ ಕೆಎಸ್ ಈಶ್ವರಪ್ಪ 112 ಮತ ಗಳಿಸಿ ಠೇವಣಿ ಕಳೆದುಕೊಂಡಿದ್ದಾರೆ.












Click it and Unblock the Notifications