ಭೂಕಬಳಿಕೆ ಪ್ರಕರಣ: ಡಿಎಂಕೆ ಶಾಸಕ ಅನ್ಬಳಗನ್ ಬಂಧನ
ಚೆನ್ನೈ,
ಜುಲೈ 30: ನೆರೆಯ ತಮಿಳುನಾಡಿನಲ್ಲಿ ಜಯಲಲಿತಾ ವಿಜೃಂಭಿಸಲಾರಂಭಿಸಿದ್ದಾರೆ. ಭೂಕಬಳಿಕೆ ಪ್ರಕರಣಗಳನ್ನು ಮುಂದಿಟ್ಟುಕೊಂಡು ಬಂಧನಗಳ ಪರ್ವ ಶುರುವಾಗಿಸಿದ್ದಾರೆ. ನಮ್ಮಲ್ಲೂ ಭೂಕಬಳಿಕೆ ಅವ್ಯಾಹತವಾಗಿದೆ. ಜತೆಗೆ ಅಧಿಕಾರವೂ ಬದಲಾಗುತ್ತಿದೆ. ನೋಡೋಣ ಏನಾಗುತ್ತದೋ. id="toptextpromo">ಇಂದು
ಬೆಳ್ಳಬೆಳಗ್ಗೆ ಏನಾಯಿತೆಂದರೆ ಡಿಎಂಕೆ ಶಾಸಕ ಜೆ. ಅನ್ಬಳಗನ್ ಅವರನ್ನು ಭೂಕಬಳಿಕೆ ಆರೋಪದಡಿ ಜಯರಾಂ ಜಯಲಲಿತಾ ಪೊಲೀಸರು ಬಂಧಿಸಿದ್ದಾರೆ. ನಗರದ ಪ್ರತಿಷ್ಠಿತ ಚೆಪಾಕ್ ಕ್ಷೇತ್ರದ ಶಾಸಕ ಅನ್ಬಳಗನ್ ಗೆ ತಿರುಪ್ಪೂರ್ ಪೊಲೀಸರು ಅವರ ನಿವಾಸದಲ್ಲೇ ಕೈಗೆ ಕೋಳ ತೊಡಿಸಿದ್ದಾರೆ. ಅನ್ಬಳಗನ್, ಡಿಎಂಕೆ ದಕ್ಷಿಣ ಚೆನ್ನೈನ ಜಿಲ್ಲಾ ಕಾರ್ಯದರ್ಶಿ. id='are-slot-1' class='oiad oi-axt oiadv'> id='top-searched-articles'>ತಮಿಳುನಾಡಿನಲ್ಲಿ
ಡಿಎಂಕೆ ಅಧಿಕಾರದಿಂದ ಕೆಳಗಿಳಿದ ಬಳಿಕ ಭೂಕಬಳಿಕೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಇತರರೆಂದರೆ ಮಾಜಿ ಸಚಿವರಾದ ವೀರಪಾಂಡಿ ಆರ್ಮುಗಂ ಮತ್ತು ಕೆ. ಎನ್. ನೆಹ್ರು. ಜತೆಗೆ ಕೇಂದ್ರ ಸಚಿವ ಅಳಗಿರಿಯ ಅನೇಕ ಬಂಟರು ಈಗಾಗಲೇ ಕಂಬಿ ಎಣಿಸುತ್ತಿದ್ದಾರೆ.











Click it and Unblock the Notifications