ಸರಕಾರ ಬಿದ್ದರೂ ಅಡ್ಡಿಯಿಲ್ಲ, ಯಡ್ಡಿ ರಾಜೀನಾಮೆ ನೀಡಲಿ

ಯಡಿಯೂರಪ್ಪನವರು ಆಡಿಸುತ್ತಿರುವ ಆಟದಿಂದ ಬೇಸತ್ತಿರುವ ದೆಹಲಿಯಲ್ಲಿನ ಹಿರಿಯ ನಾಯಕರು, ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬಿದ್ದರೂ ಅಡ್ಡಿಯಿಲ್ಲ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಬಾರದು, ಆಗಸ್ಟ್ 1ರಿಂದ ಆರಂಭವಾಗುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಗೆಪಾಟಲಿಗೆ ಈಡಾಗಬಾರದೆಂಬ ದಿಟ್ಟ ನಿಲುವಿಗೆ ಬಂದಿದೆ.
ಯಡಿಯೂರಪ್ಪ ಬೇಷರತ್ ರಾಜೀನಾಮೆ ನೀಡಲೇಬೇಕು ಎಂಬ ಸ್ಪಷ್ಟ ಸಂದೇಶವನ್ನು ದೆಹಲಿಯಿಂದ ರವಾನಿಸಲಾಗಿದೆ. ಒಂದು ವೇಳೆ ರಾಜೀನಾಮೆ ನೀಡಲು ಮತ್ತೆ ಹಿಂದೇಟು ಹಾಕಿದರೆ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಶಾಸಕಾಂಗ ಪಕ್ಷದ ಸಭೆ ನಡೆಸಿ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಸಂಭವನೀಯತೆ ಹೆಚ್ಚಾಗಿದೆ. [ಯಾರು ಮುಂದಿನ ಮುಖ್ಯಮಂತ್ರಿ?]
ಈ ನಡುವೆ, ಯಡಿಯೂರಪ್ಪರೊಂದಿಗೆ ಗುರುತಿಸಿಕೊಂಡಿದ್ದ ಶಾಸಕರ ಸಂಖ್ಯೆಯೂ ಕರಗುತ್ತಿದೆ ಎಂಬ ವರ್ತಮಾನ ಬಂದಿದೆ. ಅಲ್ಲದೆ, ಯಡಿಯೂರಪ್ಪನವರನ್ನು ತಕ್ಷಣ ತೊರೆದು ಬೆಂಗಳೂರಿನಲ್ಲಿರುವ ವೀಕ್ಷಕರಾದ ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಬೇಕೆಂಬ ಸಂದೇಶವೂ ರವಾನೆಯಾಗಿದೆ.












Click it and Unblock the Notifications