ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆಯಲಿ

ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಗಣಿ ವರದಿ ಸಲ್ಲಿಸುವುದಕ್ಕೂ ಮುನ್ನ ಸೋರಿಕೆಯಾಗಿರುವುದರಿಂದ ವರದಿ ಸಂಪೂರ್ಣವಾಗಿ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಂಡಿದೆ. ಯಡಿಯೂರಪ್ಪ ಅವರು ರಾಜೀನಾಮೆ ಸಲ್ಲಿಸುವ ಮೊದಲು ಶಾಸಕರು ಹಾಗೂ ಸಂಸದರ ಅಭಿಪ್ರಾಯ ಸಂಗ್ರಹಿಸಬೇಕು. ಯಡಿಯೂರಪ್ಪ ಪಕ್ಷಾತೀತರಲ್ಲ. ಹೈ ಕಮಾಂಡ್ ಏಕಾಏಕಿ ನಿರ್ಣಯ ತೆಗೆದುಕೊಳ್ಳುವುದು ಸರಿಯಲ್ಲ.
ಶಾಸಕರು ಹಾಗೂ ಸಂಸದರ ಅಭಿಪ್ರಾಯಕ್ಕೆ ಮನ್ನಣೆ ಕೊಡಬೇಕಾಗುತ್ತದೆ. ಯಡಿಯೂರಪ್ಪ ಅವರ ರಾಜೀನಾಮೆಯನ್ನು ತಿರಸ್ಕರಿಸುವಂತೆ ಮನವಿ ಮಾಡುವುದಾಗಿ ಡಿಬಿ ಚಂದ್ರೇಗೌಡ ಹೇಳಿದರು.
ಡಿಬಿ ಚಂದ್ರೇಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು 14 ಜನ ಸಂಸದರು ಹಾಗೂ 25ಕ್ಕೂ ಶಾಸಕರು ಪಾಲ್ಗೊಂಡಿದ್ದರು. ಆದರೆ, ಅನಂತ್ ಕುಮಾರ್ ದೆಹಲಿಯಿದ್ದ ಕಾರಣ ಸಭೆಗೆ ಹಾಜರಾಗಿಲ್ಲ.
ಆದರೆ, ಕುಮಾರ ಕೃಪ ಗೆಸ್ಟ್ ಹೌಸ್ ನಲ್ಲಿ ದೆಹಲಿ ನಾಯಕರ ನೇತೃತ್ವದಲ್ಲಿ ಆರಂಭವಾದ ಸಭೆಗೆ ಹಾಜರಾಗಲು ದೆಹಲಿಯಿಂದ ಬೆಂಗಳೂರಿಗೆ ಅನಂತ್ ಬಂದಿಳಿದಿದ್ದಾರೆ. ಆದರೆ ಸಿಎಂ ರಾಜೀನಾಮೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಹರಿಹರ ಶಾಸಕ ಬಿಪಿ ಹರೀಶ್ ಅವರು ಮಾತನಾಡಿ, ಯಡಿಯೂರಪ್ಪ ಅವರಿಂದ ಬಿಜೆಪಿಯಲ್ಲಿ ಒಗ್ಗಟ್ಟು ಎಂಬುದಿದೆ. ಅವರೇ ಹೋದರೆ ಪಕ್ಷದ ಬೆಳವಣಿಗೆ ಕುಂಠಿತವಾಗುತ್ತದೆ. 40ಕ್ಕೂ ಹೆಚ್ಚು ಶಾಸಕರು ಯಡಿಯೂರಪ್ಪ ಅವರಿಗೆ ಒಕ್ಕೊರಲ ಬೆಂಬಲ ಸೂಚಿಸಿದ್ದಾರೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮುಂದುವರೆಸಿದರೆ ಮಾತ್ರ ಪಕ್ಷ ಉಳಿಯಲು ಸಾಧ್ಯ ಎಂದರು.












Click it and Unblock the Notifications