ಯಡ್ಡಿಗೆ ಉಡುಪಿ, ಸುತ್ತೂರು ಸ್ವಾಮೀಜಿಗಳ ಶ್ರೀರಕ್ಷೆ ಇನ್ನಿಲ್ಲ

ಯುಡಿಯೂರಪ್ಪ ಸಂಕಷ್ಟಕ್ಕೆ ಸಿಲುಕಿದಾಗ ಸಲಹೆ, ಸೂಚನೆ ನೀಡಿ ಕೈ ಹಿಡಿದು ಮೇಲಕ್ಕೆ ಎತ್ತುತ್ತಿದ್ದ ಉಡುಪಿಯ ಶ್ರೀಮಠ ಕೂಡಾ ಈಗ ಬೇರೆ ರಾಗ ಹಾಡುತ್ತಿದೆ. ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಚಾತುರ್ಮಾಸ ವ್ರತಕ್ಕೆ ಅಣಿಯಾಗುತ್ತಿದ್ದು, ಅದಕ್ಕೂ ಮುನ್ನ ಯಡಿಯೂರಪ್ಪ ಅವರಿಗೆ ಕುರ್ಚಿ ಆಸೆ ಬಿಡುವಂತೆ ಸೂಚಿಸಿದ್ದಾರೆ.
ಸೂತ್ತೂರು ಶ್ರ್ರೀಗಳ ಹೇಳಿಕೆ :ವ್ಯಕ್ತಿಗಿಂತ ರಾಷ್ಟ್ರ ಹಾಗೂ ರಾಜ್ಯದ ಹಿತವೇ ಮುಖ್ಯ, ಯಡಿಯೂರಪ್ಪ ಅವರು ವೀರಶೈವರ ಘನತೆ ಉಳಿಸಬೇಕು. ಸಿಎಂ ಪದವಿ ತೊರೆಯುವುದು ಉತ್ತಮ ಎಂದು ಸುತ್ತೂರು ಶ್ರೀಗಳು ಹೇಳಿದ್ದಾರೆ.
ರಾಷ್ಟ್ರೀಯ ಪಕ್ಷ ಬಿಜೆಪಿಗೆ ಸಂದಿಗ್ಧ ಪರಿಸ್ಥಿತಿ ನಿಭಾಯಿಸುವುದು ಗೊತ್ತಿದೆ. ನಾವು ಸಲಹೆ ನೀಡುವ ಅವಶ್ಯಕತೆ ಇಲ್ಲ. ಲೋಕ ಕಲ್ಯಾಣಾರ್ಥವಾಗಿ ಹೇಳುವುದಾದರೆ ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಇತರರಿಗೆ ಅವಕಾಶ ನೀಡಬೇಕು ಎಂದಿದ್ದಾರೆ.
ಈ ನಡುವೆ ವೀರಶೈವ ಸಮುದಾಯದವರಿಗೆ ಸಿಎಂ ಪಟ್ಟನೀಡಬೇಕು ಎಂದು ಹುಬ್ಬಳಿಯ ಮೂರು ಸಾವಿರ ಮಠಾಧೀಶರು ಸೇರಿದಂತೆ ಉತ್ತರ ಕರ್ನಾಟಕದ ಹಲವು ವೀರಶೈವ ಸ್ವಾಮೀಜಿಗಳು ಆಗ್ರಹಿಸಿದ್ದಾರೆ. ಜಗದೀಶ್ ಶೆಟ್ಟರ್ ಉತ್ತಮ ನಾಯಕ ಅವರು ಮುಖ್ಯಮಂತ್ರಿ ಆಗುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.
ಯಡಿಯೂರಪ್ಪ ಅವರ ತಲೆ ಕಾಯ್ದು ಕಾಪಾಡಿಕೊಂಡೂ ಬಂದಿರುವ ಸಿದ್ಧಗಂಗಾ ಮಠದ ಶ್ರೀಗಳು ಮಾತ್ರ ರಾಜಜೀಯ ಬೆಳವಣಿಗೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಆರೋಪ ಹೊತ್ತ ಸಚಿವ ಸೋಮಣ್ಣ ಮಾತ್ರ ಸಿದ್ದಗಂಗೆಗೆ ಭೇಟಿ ನೀಡಿದ್ದು.












Click it and Unblock the Notifications