ಬಳ್ಳಾರಿ ಜಿಲ್ಲೆಯಾದ್ಯಂತ ಗಣಿಗಾರಿಕೆ ಬಂದ್ : ಕೋರ್ಟ್

ಈ ಗಣಿಗಾರಿಕೆಯಿಂದ ವಿದೇಶಕ್ಕೆ ರಫ್ತಾರುತ್ತಿರುವ ಅದಿರಿನ ಮಾಹಿತಿ ಸೇರಿದಂತೆ ಸಮಗ್ರ ವಿವರಗಳನ್ನು 1 ವಾರದೊಳಗೆ ನೀಡುವಂತೆ ಕೇಂದ್ರ ಪರಿಸರ ಇಲಾಖೆಗೆ ಆದೇಶ ನೀಡಿದೆ. ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ವರದಿ ಬಹಿರಂಗವಾಗಿರುವ ಸಂದರ್ಭದಲ್ಲಿಯೇ ಈ ವರದಿ ಬಂದಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ದುರಾಸೆಗಾಗಿ ಭೂಮಿಯಲ್ಲಿ ಹುದುಗಿರುವ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಗಣಿ ಕಂಪನಿಗಳ ಬಗ್ಗೆ ಕೆಂಡ ಕಾರಿರುವ ಸುಪ್ರೀಂ ಕೋರ್ಟ್, ಇದು ಹೀಗೇ ಮುಂದುವರಿದರೆ ಬಳ್ಳಾರಿಯಲ್ಲಿ ಏನೂ ಉಳಿಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಗಣಿಗಾರಿಕೆಯಿಂದ ಜಿಲ್ಲೆಯಲ್ಲಿ ಎಷ್ಟು ನಷ್ಟವಾಗಿದೆಯೋ ಅದನ್ನು ನಷ್ಟು ಮಾಡಿದವರೇ ಭರಿಸಬೇಕು ಎಂದೂ ಅವರ ಅಭಿಪ್ರಾಯಪಟ್ಟಿದೆ. ಬಳ್ಳಾರಿ ಜಿಲ್ಲೆಯಾದ್ಯಂತ ಒಟ್ಟು 11 ಹೆಕ್ಟೇರ್ ಮತ್ತು 604 ಎಕರೆ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ.












Click it and Unblock the Notifications