ಯಡಿಯೂರಪ್ಪ 'ಆಷಾಢ'ಭೂತಿತನ: ರಾಜೀನಾಮೆ ಸದ್ಯಕ್ಕಿಲ್ಲ

ಆದರೆ ಪಾಪಾ ಪಾಂಡು! ಕೆಟ್ಟ ಕೆಲಸಗಳನ್ನು ಮಾಡುವುದಕ್ಕೆ ಇವರ ಗ್ರಹಗತಿಗಳು ಸರಿಯಿದ್ದವೇ ಎಂದು ಮಂದಿ ಕುಹಕವಾಡಿದ್ದಾರೆ. ಸಂಖ್ಯಾಶಾಸ್ತ್ರಿಗಳು, ಜ್ಯೋತಿಷಿಗಳು ಒಂದೇ ಸಮನೆ ರಸ್ ಕೋರ್ಟ್ ರಸ್ತೆಯಲ್ಲಿರುವ ಯಡಿಯೂರಪ್ಪ ನಿವಾಸದ ಸುತ್ತ ಠಳಾಯಿಸುತ್ತಿದ್ದಾರೆ.
ಜ್ಯೋತಿಷಿಗಳ ಪ್ರಕಾರ ಯಡಿಯೂರಪ್ಪ ಅವರಿಗೆ ಗುರುವಾರದವರೆಗೆ (ಜು.28) ಗ್ರಹಗತಿ ಸರಿ ಇಲ್ಲ. ಇದೇ 30ರ ಅಮಾವಸ್ಯೆ ನಂತರ ಎಲ್ಲ ಸಂಕಷ್ಟಗಳೂ ಪರಿಹಾರವಾಗಲಿವೆ. ಹೀಗಾಗಿಯೇ 31ರ ವರೆಗೂ ರಾಜೀನಾಮೆ ನೀಡುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಜು. 28ರ ನಂತರವೂ ಅಧಿಕಾರದಲ್ಲಿ ಉಳಿದರೆ ಭವಿಷ್ಯದ ರಾಜಕಾರಣ ಉಜ್ವಲವಾಗಿರುತ್ತದೆ ಎನ್ನುವ ಜ್ಯೋತಿಷಿಗಳ ಸಲಹೆಯಿಂದಾಗಿ ಅವರು ರಾಜೀನಾಮೆ ನೀಡುತ್ತಿಲ್ಲ ಎಂದು ಗೊತ್ತಾಗಿದೆ. 'ನಾನು ರಾಜೀನಾಮೆ ನೀಡುತ್ತೇನೆ. ಆದರೆ, ಅದಕ್ಕೆ ಕಾಲ ಕೂಡಿಬರಬೇಕು. ಅದಕ್ಕಾಗಿ ಕಾಯುತ್ತಿದ್ದೇನೆ' ಎಂದು ಆಪ್ತರ ಮುಂದೆ ಹೇಳಿದ್ದಾರೆನ್ನಲಾಗಿದೆ.












Click it and Unblock the Notifications