ಮತ್ತೆ ಬಿಜೆಪಿ ಜೊತೆ ಕೈ ಜೋಡಿಸಲ್ಲ: ಕುಮಾರಸ್ವಾಮಿ

ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗೌರವಯುತವಾಗಿ ಸ್ವೀಕರಿಸಿ, ಸುಲಭವಾಗಿ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂಬ ನಂಬಿಕೆ ನನಗಿಲ್ಲ. ಸರ್ಕಾರ ಪತನದ ನಂತರ ಹೊಸ ಸರ್ಕಾರಕ್ಕೆ ಬೇಕಾದ ಅಗತ್ಯ ಬೆಂಬಲ ನೀಡಲು ಜೆಡಿಎಸ್ ಸಿದ್ಧವಿಲ್ಲ.
ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ಪರ್ಯಾಯ ನಾಯಕನನ್ನು ಆಯ್ಕೆ ಮಾಡಿ ಸರ್ಕಾರ ರಚಿಸಿ ಅಭಿವೃದ್ಧಿಯತ್ತ ಗಮನ ಹರಿಸಲಿ. ಯಡಿಯೂರಪ್ಪ ಅವರು ಪಕ್ಷ ಒಡೆಯದಿದ್ದರೆ ಒಳ್ಳೆಯದು ಎಂದು ಕುಮಾರಸ್ವಾಮಿ ಹಿತನುಡಿದಿದ್ದಾರೆ. ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಎಚ್ ಡಿ ರೇವಣ್ಣ ಕನಸು: ಪ್ರತಿ ಬಾರಿ ಹೊಸ ಸರ್ಕಾರ ರಚನೆ ಸಂದರ್ಭದಲ್ಲಿ ನನಗೆ ಒಂದು ಚಾನ್ಸ್ ಸಿಗುವುದೇ ಎಂದು ಇಣುಕಿ ನೋಡುವ ದೇವೇಗೌಡರ ಪ್ರಥಮ ಪುತ್ರ ಎಚ್ ಡಿ ರೇವಣ್ಣ ಅವರು ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಯಡಿಯೂರಪ್ಪ ತಮ್ಮ ಬೆಂಬಲಿಗರೊಂದಿಗೆ ಪಕ್ಷ ತೊರೆದರೆ ಉಂಟಾಗುವ ಅತಂತ್ರ ಸ್ಥಿತಿ ಲಾಭ ಪಡೆಯಲು ಕುಮಾರಸ್ವಾಮಿ ಹೊರತು ಪಡಿಸಿ ಜೆಡಿಎಸ್ ನ ಹಿರಿಯ ಮುಖಂಡರು ಯೋಜನೆ ಹಾಕಿದ್ದಾರೆ ಎನ್ನಲಾಗಿದೆ.
ಬಿಜೆಪಿ ಜೊತೆ ಸೇರಿ ಮತ್ತೆ ಸಮ್ಮಿಶ್ರ ಸರ್ಕಾರ ರಚನೆ ಮಾಡುವುದು ಜೆಡಿಎಸ್ ನ ಕೆಲ ನಾಯಕರ ಕನಸಾಗಿದೆ. ಅಧಿಕಾರ ಇಲ್ಲದೆ ಸುಮ್ಮನೆ ಕಂಠ ಶೋಷಣೆ ಮಾಡಿಕೊಳ್ಳುವುದಕ್ಕಿಂತ ಹಂಚಿಕೊಂಡು ಬದುಕುವ ಯೋಚನೆಯಲ್ಲಿದ್ದಾರೆ. ಈ ಬಗ್ಗೆ ಪಕ್ಷದ ಹಲವು ಶಾಸಕರಿಗೆ ಸಂದೇಶ ರವಾನೆಯಾಗಿದೆ. ಆದರೆ, ಎಲ್ಲವೂ ಯಡಿಯೂರಪ್ಪ ಅವರ ಮುಂದಿನ ನಡೆ ಮೇಲೆ ನಿರ್ಧಾರವಾಗಿದೆ.












Click it and Unblock the Notifications