ಮೊದಲು ತೀರ್ಮಾನ ಪ್ರಕಟಿಸಿ, ಆಮೇಲೆ ರಾಜೀನಾಮೆ ನೀಡಿ

ವರಿಷ್ಠರ ನಿರ್ಧಾರವನ್ನು ಗೌರವಿಸಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಅವರು ಸೂಚಿಸಿದವರನ್ನೇ ಉತ್ತರಾಧಿಕಾರಿಯಾಗಿ ನೇಮಕ ಮಾಡುವ ಕುರಿತೂ ಬಿಜೆಪಿ ಪರಿಶೀಲಿಸುವ ಸಾಧ್ಯತೆಯಿದೆ.
ಬಿಜೆಪಿ ಶಾಸಕಾಂಗ ಪಕ್ಷದ ಹೊಸ ನಾಯಕನ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಿರಿಯ ಬಿಜೆಪಿ ಮುಖಂಡರಾದ ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂಗ್ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಬೆಂಗಳೂರಿಗೆ ತೆರಳುವರು. ತಕ್ಷಣ ರಾಜೀನಾಮೆ ನೀಡುವಂತೆ ಯಡಿಯೂರಪ್ಪ ಮೇಲೆ ಅವರು ಒತ್ತಡ ಹೇರಲಿದ್ದಾರೆ.
'ಪಕ್ಷಕ್ಕೆ ವಿರುದ್ಧವಾಗಿ ಹೋಗಬೇಡಿ. ವರಿಷ್ಠರ ತೀರ್ಮಾನ ಧಿಕ್ಕರಿಸಿದರೆ ಕಲ್ಯಾಣ್‌ಸಿಂಗ್ ಮತ್ತು ಉಮಾ ಭಾರತಿ ಅವರಿಗಾದ ಗತಿ ನಿಮಗೂ ಆಗುತ್ತದೆ' - ಬಿಜೆಪಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವರಿಷ್ಠರು ಕೊಟ್ಟಿರುವ ಎಚ್ಚರಿಕೆ.
ಪಕ್ಷಕ್ಕೆ ತಿರುಗಿ ಬಿದ್ದವರು, ಪಕ್ಷ ತೊರೆದು ಹೋದವರ ಕಥೆ ಏನಾಯಿತು ಎಂಬುದಕ್ಕೆ ಕಲ್ಯಾಣ್ ಸಿಂಗ್ ಮತ್ತು ಉಮಾಭಾರತಿ ನಿದರ್ಶನಗಳು ಕಣ್ಣ ಮುಂದಿವೆ. ನೀವೂ ಅವರಂತೆ ಆಗಬೇಡಿ. ಪಕ್ಷದೊಳಗಿದ್ದರೆ ನಿಮಗೆ ಬೆಲೆ. ಹೊರ ಹೋದರೆ ನಿಮ್ಮ ಹಿಂದೆ ಯಾರೂ ಇರುವುದಿಲ್ಲ. ನೀವು ಪಕ್ಷ ಬಿಟ್ಟು ರಾಜಕೀಯ ದುರಂತಕ್ಕೆ ಸಾಕ್ಷಿಯಾಗಬೇಡಿ ಎಂಬ ಕಿವಿ ಮಾತನ್ನು ನಾಯಕರು ಹೇಳಿದರು.











Click it and Unblock the Notifications