ಯಡ್ಡಿಗೆ ಒಂದು ನ್ಯಾಯ? ಗಡ್ಕರಿಗೆ ಇನ್ನೊಂದು ಏಕೆ?

ಬೆಂಗಳೂರಿನ ಸುಮನಹಳ್ಳಿ ಭಿಕ್ಷುಕರ ಕಾಲೋನಿಯಲ್ಲಿ ಸುಮಾರು 1,000 ಕೋಟಿ ರೂಪಾಯಿ ವೆಚ್ಚ ವಾಣಿಜ್ಯ ಸಂಕೀರ್ಣ, ಪಂಚತಾರಾ ಹೋಟೆಲ್ ಹಾಗೂ ಇತರ ಕಟ್ಟಡ ಕಾಮಗಾರಿಗಳು ನಡೆಯುತ್ತಿವೆ.
ಮುಂಬೈ ಮೂಲದ ಟಂಡನ್ ಅರ್ಬನ್ ಸಲ್ಯೂಷನ್ಸ್ ಗೆ ಕಾಮಗಾರಿ ಉಸ್ತುವಾರಿ ನೀಡಲಾಗಿದೆ. ಈ ಸಂಸ್ಥೆಗೂ ಗಡ್ಕರಿಗೂ ಆತ್ಮೀಯ ನಂಟಿದೆ ಬಲ್ಲ ಮೂಲಗಳು ಹೇಳಿವೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಲೆಕ್ಕಪತ್ರವಿಭಾಗದ ಜವಾಬ್ದಾರಿ ಹೊಂದಿರುವ ಬಿಜೆಪಿ ಮುಖಂಡರೊಬ್ಬರಿಗೆ ಸೇರಿರುವ ಟಂಡನ್ ಸಲ್ಯೂಷನ್ಸ್ ನ ಕಾಮಗಾರಿ ಬಗ್ಗೆ ಗಡ್ಕರಿ ಆಸಕ್ತಿವಹಿಸಿ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು.
123.30 ಎಕರೆ ಪ್ರದೇಶದಲ್ಲಿ 10 ಎಕರೆ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಉಳಿದ ಭೂ ಪ್ರದೇಶದಲ್ಲಿ ಪಂಚತಾರಾ ಹೋಟೆಲ್, ವಾಣಿಜ್ಯ ಸಂಕೀರ್ಣ, ಕ್ಲಬ್ ಮುಂತಾದವುಗಳನ್ನು ನಿರ್ಮಿಸಲು ಬಿಡಿಎ ಗ್ರೀನ್ ಸಿಗ್ನಲ್ ನೀಡಿದೆ.
ಯಡಿಯೂರಪ್ಪ-ಗಡ್ಕರಿ ಮಧ್ಯಸ್ಥಿಕೆಯಲ್ಲಿ ರಾಜ್ಯದಲ್ಲಿ ಟಂಡನ್ ಕಂಪೆನಿಗೆಮಾರುಕಟ್ಟೆ ಅಭಿವೃದ್ಧಿ , ಕೆರೆ ಅಭಿವೃದ್ಧಿ, ಕಡು ಬಡವರಿಗೆ ವಸತಿ ಯೋಜನೆ, ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ , ಹಸಿರು ತೋರಣ ಯೋಜನೆ ಮೊದಲಾದ ಕೋಟ್ಯಂತರ ರೂಪಾಯಿ ಯೋಜನೆಗಳನ್ನು ನೀಡಲಾಗಿದೆ. ಇಬ್ಬರು ನಾಯಕರು ಕೋಟ್ಯಂತರ ರೂಪಾಯಿ ಕಮಿಷನ್ ಪಡೆದಿರುವ ಶಂಕೆಯೂ ಇದೆ. ಆದರೆ, ಯಾವುದೂ ಸ್ಪಷ್ಟವಾಗಿ ಸಾಬೀತಾಗಿಲ್ಲ.












Click it and Unblock the Notifications