ಷರತ್ತುಬದ್ಧ ರಾಜೀನಾಮೆಗೆ ಯಡಿಯೂರಪ್ಪ ನಿರ್ಧಾರ

Yeddyurappa agrees to step down
ಬೆಂಗಳೂರು, ಜು. 28 : ಮೂರು ವರ್ಷಗಳಿಂದ ಅನೇಕ ಬಾರಿ ಕುರ್ಚಿಗೆ ಸಂಚಕಾರ ಬಂದಿದ್ದರೂ, ಗಟ್ಟಿಯಾಗಿ ಕಚ್ಚಿಕೊಂಡಿದ್ದ ಯಡಿಯೂರಪ್ಪ ಅನ್ಯಮಾರ್ಗವಿಲ್ಲದೆ ಪದತ್ಯಾಗದ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಗದ್ದುಗೆಯಿಂದ ಕೆಳಗಿಳಿಯಲು ಮೂರು ಷರತ್ತುಗಳನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ.

ಆ ಷರತ್ತುಗಳೇನೆಂದರೆ, 1) ತಾವು ಹೇಳಿದ ಅಭ್ಯರ್ಥಿಯೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಬೇಕು, 2) ರಾಜ್ಯಾಧ್ಯಕ್ಷ ಸ್ಥಾನ ತಮಗೆ ದೊರೆಯಬೇಕು ಮತ್ತು 3) ಅನೇಕ ಹಗರಣಗಳಲ್ಲಿ ಸಿಲುಕಿರುವ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಯಾವುದೇ ತೊಂದರೆಯಾಗಬಾರದು. [ಈ ಆರು ಮಂದಿಯಲ್ಲಿ ಯಾರಿಗೆ ಒಲಿಯಲಿದೆ ಅದೃಷ್ಟ?]

ಅಕ್ರಮ ಗಣಿಗಾರಿಕೆಯಲ್ಲಿ ಯಡಿಯೂರಪ್ಪನವರ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗಿದ್ದರೂ, ಜಪ್ಪಯ್ಯ ಅಂದರೂ ರಾಜೀನಾಮೆ ನೀಡುವುದಿಲ್ಲ ಎಂದು ನಿನ್ನೆ ಯಡಿಯೂರಪ್ಪ ಹಠ ಹಿಡಿದಿದ್ದರು. ಮುಂದಿನ 2 ವರ್ಷ ತಾವೇ ಮುಖ್ಯಮಂತ್ರಿ ಎಂದೂ ಘೋಷಿಸಿಕೊಂಡಿದ್ದರು.

ಆದರೆ, ಕೊನೆಗೂ ಹೈಕಮಾಂಡ್ ಒತ್ತಡಕ್ಕೆ ಯಡಿಯೂರಪ್ಪ ಮಣಿದಿದ್ದು, ತಮ್ಮ ಬಿಗಿ ನಿಲುವನ್ನು ಸಡಲಿಸಿದ್ದಾರೆ. ತಮ್ಮ ನಿವಾಸದಲ್ಲಿ ಆಪ್ತರೊಂದಿಗೆ ಸುಮಾರು 45 ನಿಮಿಷಗಳ ಕಾಲ ಸಭೆ ನಡೆಸಿದ ನಂತರ ಪದತ್ಯಾಗಕ್ಕೆ ಭಾರವಾದ ಮನಸ್ಸಿನಿಂದ ನಿರ್ಧರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+