ಬಳ್ಳಾರಿ ರೆಡ್ಡಿ ಸೋದರರು ಎಲ್ಲಿ, ಅವರ ನಡೆಯೇನು?

Janardhan Reddy
ಬೆಂಗಳೂರು, ಜುಲೈ 28: ಅಕ್ರಮ ಗಣಿಗಾರಿಕೆಯ ಸೂತ್ರಧಾರ ಎಂದೇ ಬಿಂಬಿತವಾಗಿರುವ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಸೋದರರು ತಮ್ಮ ಗಾಡ್ ಫಾದರ್ ರಾಜೀನಾಮೆಯ ಸಮ್ಮುಖದಲ್ಲಿ ಎಲ್ಲಿದ್ದಾರೆ, ಅವರ ಮುಂದಿನ ನಡೆಯೇನು ಎಂಬುದು ಕುತೂಹಲ ಮೂಡಿಸಿದೆ.

ತ್ರಿಮೂರ್ತಿಗಳು ತಕ್ಷಣಕ್ಕೆ ಬಿ. ಎಸ್. ಯಡಿಯೂರಪ್ಪ ರಾಜೀನಾಮೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹೈಕಮಾಂಡ್ ಕೈಗೊಳ್ಳುವ ಎಲ್ಲ ನಿರ್ಧಾರಗಳಿಗೂ ನಾವು ಬದ್ಧರಿರುತ್ತೇವೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪಗೆ ಮನದಟ್ಟುಪಡಿಸಿದ್ದಾರೆ.

ಮೂವರೂ ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದ್ದು, ಹಾಲಿ ವಿದ್ಯಾಮಾನಗಳತ್ತ ಗಮನ ಹರಿಸಿದ್ದೇವೆ. ಸದ್ಯಕ್ಕೆ ಲೋಕಾಯುಕ್ತ 'ಗಣಿಗಾರಿಕೆ' ವರದಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ವರದಿಯ ಪ್ರತಿ ಕೈಸೇರಿದ ಮೇಲೆ ಅಧ್ಯಯನ ಮಾಡಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಶ್ರೀರಾಮುಲು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದೇ ವೇಳೆ, ಕಾನೂನು ಮುಂದೆ ಎಲ್ಲರೂ ಸಮಾನರು. ಯಡಿಯೂರಪ್ಪ ಅವರೇ ಹೋದ ಮೇಲೆ ಬೇರೆಯವರ ಲೆಕ್ಕ ಯಾವುದು? ಎಂದು ಲೋಕಾಯುಕ್ತ ವರದಿಯಲ್ಲಿ ರಾರಾಜಿಸುತ್ತಿರುವ ರೆಡ್ಡಿ ಸೋದರರ ಭವಿಷ್ಯದ ಬಗ್ಗೆ ಸಂಕೇತ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+