ಆಟ ಮುಗಿಯಿತು, ಸ್ಪಷ್ಟವಾಯಿತು ರಾಜೀನಾಮೆ
ಬೆಂಗಳೂರು,
ಜುಲೈ 28: ಇಂದು ಬೆಳಗ್ಗೆ 10 ಗಂಟೆಗೆ ದೆಹಲಿಯಲ್ಲಿ ಸಭೆ ಸೇರಿದ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ರಾಜೀನಾಮೆ ಬಗ್ಗೆ ಸ್ಪಷ್ಟ ನಿಲುವು ತಳೆದು, ರಾಜೀನಾಮೆ ನೀಡಲೇಬೇಕು ಎಂದು ಯಡಿಯೂರಪ್ಪಗೆ ಆದೇಶಿಸಿದೆ. id="toptextpromo">ಮುಖ್ಯಮಂತ್ರಿ
ಪದವಿ ತ್ಯಜಿಸುವುದಕ್ಕೆ 12 ಗಂಟೆಗಳ ಡೆಡ್ ಲೈನ್ ನೀಡಿದ್ದು, ಇಂದು ಸಂಜೆಯೊಳಗಾಗಿ ರಾಜೀನಾಮೆ ನೀಡದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಯಡಿಯೂರಪ್ಪಗೆ ಎಚ್ಚರಿಸಿದೆ. ಇದರಿಂದಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ತ್ಯಜಿಸುವುದು ಖಚಿತವಾಗಿದೆ. id='are-slot-1' class='oiad oi-axt oiadv'> id='top-searched-articles'>ಸಭೆಯ
ಬಗ್ಗೆ ಮಾಹಿತಿ ನೀಡಿದ ಪಕ್ಷದ ವಕ್ತಾರ ರವಿಶಂಕರ್ ಪ್ರಸಾದ್, ಕರ್ನಾಟಕದಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆ ಸಂಬಂಧ ಅರುಣ್ ಜೇಟ್ಲಿ ಮತ್ತು ರಾಜ್ ನಾಥ್ ಸಿಂಗ್ ಅವರು ಶುಕ್ರವಾರ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂದೂ ಹೇಳಿದ್ದಾರೆ.











Click it and Unblock the Notifications