ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಕ್ತಿ ಪ್ರದರ್ಶನಕ್ಕೆ ಮುಂದಾದ ಯಡ್ಡಿ, ಡಿಲ್ಲಿಗೆ ದೌಡು

By Mahesh
|
Google Oneindia Kannada News

Yeddyurappa gets call from BJP high command
ಬೆಂಗಳೂರು ಜು 27: ಅಕ್ರಮ ಗಣಿಗಾರಿಕೆ ವರದಿ ಸೋರಿಕೆಯಾದಂತೆ, ಹೈಕಮಾಂಡ್ ಕಡೆಯಿಂದಲೂ ಸುದ್ದಿ ಲೀಕ್ ಆಗಿದೆ. ಯಡಿಯೂರಪ್ಪ ಕಳಿಸಿದ್ದ ರಾಜೀ ಸೂತ್ರ ರಿಜೆಕ್ಟ್ ಆದ ಹಿನ್ನೆಲೆಯಲ್ಲಿ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ನಿರೀಕ್ಷೆಯಂತೆ ಈಶ್ವರಪ್ಪ, ಧನಂಜಯ್ ಕುಮಾರ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಬುಲಾವ್ ಕೊಟ್ಟಿದೆ. ಸಂಜೆ ಸದಾನಂದ ಗೌಡ ವಿಮಾನ ಏರಿದ ನಂತ ಈ ಮೂವರು ದೆಹಲಿ ವಿಮಾನ ಏರಲಿದ್ದಾರೆ.

ಈ ಮಧ್ಯೆ ಯಡಿಯೂರಪ್ಪ ಅವರ ರಾಜೀ ಸೂತ್ರ ಕೂಡಾ ಲೀಕ್ ಆಗಿದ್ದು ಹಿತ ಶತ್ರುಗಳಾದ ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ, ಅನಂತ್ ಕುಮಾರ್ ಅವರಿಗೆ ಸಿಎಂ ಪಟ್ಟ ನೀಡುವುದು ಬೇಡ. ಸದಾನಂದ ಗೌಡ, ವಿಎಸ್ ಆಚಾರ್ಯ ಅವರಿಗೆ ಪಟ್ಟ ಕಟ್ಟಿದರೂ ಓಕೆ ಎಂದು ಯಡಿಯೂರಪ್ಪ ಕಳಿಸಿದ್ದ ಸಲಹೆಗೆ ಹೈಕಮಾಂಡ್ ಸೊಪ್ಪು ಹಾಕಿಲ್ಲ.

ರೇಣುಕಾ ಸಭೆ: ಈ ಮಧ್ಯೆ ಬಿಜೆಪಿಯ ಹಳೆ ಕಚೇರಿಯಲ್ಲಿ ಯಡಿಯೂರಪ್ಪ ಅವರ ಆಪ್ತ ಸಚಿವರು, ಶಾಸಕರನ್ನು ಒಂದೆಡೆ ಸೇರಿಸಿರುವ ರೇಣುಕಾಚಾರ್ಯ ಅವರು ಗಿಳಿಪಾಠ ಮಾಡುತ್ತಿದ್ದಾರೆ.

ಯಡಿಯೂರಪ್ಪ ಅವರ ಅಣತಿ ಮೇರೆಗೆ ಈ ಸಭೆ ನಡೆಯುತ್ತಿದೆ ಎನ್ನಲಾಗಿದ್ದು, ದೆಹಲಿಯಿಂದ ಸಂದೇಶ ಬಂದ ನಂತರ ಇಲ್ಲಿ ಗದ್ದಲ ಆರಂಭವಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.

ಕಚೇರಿ ತಲುಪಿದ ವರದಿ: ಈ ಮಧ್ಯೆ ಮೂರು ಸೂಟ್ ಕೇಸ್ ಗಳಲ್ಲಿ ಕುತೂಹಲಕಾರಿ ವರದಿಯನ್ನು ಹೊತ್ತ ಹಿರಿಯ ಅಧಿಕಾರಿ ಯು.ವಿ. ಸಿಂಗ್ ಅವರು ಬಿಗಿ ಭದ್ರತೆ ನಡುವೆ ಲೋಕಾಯುಕ್ತ ಕಚೇರಿ ತಲುಪಿದ್ದಾರೆ. ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಕೂಡಾ ತಮ್ಮ ಕಚೇರಿ ಹಾಜರಾಗಿದ್ದಾರೆ.

English summary
Karnataka CM Yeddyurappa has finally decided to show is strength in said he is not afraid of Lokayukta N Santosh Hegde's report on illegal mining. Mean while BJP high command has called Yeddyurappa, Eshwarappa and Dhananjay Kumar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X