ಗಣಿ ವರದಿ ಸಲ್ಲಿಕೆ: ಲೋಕಾಯುಕ್ತ ಸುದ್ದಿಗೋಷ್ಠಿ ಹೈಲೈಟ್ಸ್

ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತ ಮೊದಲ ವರದಿಯನ್ನು 18 ಡಿಸೆಂಬರ್ 2008ರಲ್ಲಿ ಸರ್ಕಾರಕ್ಕೆ ಕೊಟ್ಟಿದ್ದೆವು. ಗಣಿ ಪರವಾನಿಗೆ, ಕಬ್ಬಿಣ ಅದಿರು ರಫ್ತು ವಿಷಯದಲ್ಲಿ ನಡೆದಿರುವ ಅಕ್ರಮ ಬಗ್ಗೆ ಅದರಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಮಧ್ಯಂತರ ವರದಿ ಬಗ್ಗೆ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
' ನನ್ನ ಕರ್ತವ್ಯ ನಾನು ಮಾಡಿದ್ದೇನೆ, ಸರ್ಕಾರ ಒಂದು ವೇಳೆ ವರದಿ ತಿರಸ್ಕರಿಸಿದರೂ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಲೋಕಾಯುಕ್ತ ಪೊಲೀಸರು ಎಲ್ಲಾ ಸಿದ್ದತೆ ನಡೆಸಿದ್ದಾರೆ. ರಾಜ್ಯಪಾಲರಿಗೆ ವರದಿಯ ಪ್ರತಿ ಕಳಿಸಿಕೊಟ್ಟಿದ್ದೇನೆ. ಹಾಗೂ ಸುಪ್ರೀಂ ಕೋರ್ಟ್ ಬಯಸಿದರೆ ವರದಿಯ ನಕಲು ಸಲ್ಲಿಸಲಾಗುವುದು. ಲೋಕಾಯುಕ್ತ ಕಾಯ್ದೆ 12 ರ ಪ್ರಕಾರ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬಹುದಾಗಿದೆ ಎಂದರು.
ರಾಚೇನಹಳ್ಳಿಯಲ್ಲಿ ಜಮೀನು ಖರೀದಿ ಹೆಸರಿನಲ್ಲಿ ಅಕ್ರಮವಾಗಿ ಸಿಎಂ ಕುಟುಂಬಕ್ಕೆ 20 ಕೋಟಿ ರು ಹಣ ಸಂದಾಯವಾಗಿರುತ್ತದೆ. ಈ ಜಮೀನಿನ ಅಸಲಿ ಬೆಲೆ 1 ಕೋಟಿ 25ಲಕ್ಷ ರೂ ಆಗಿರುತ್ತದೆ. ಸುಮಾರು 4 ಲಕ್ಷ ಪುಟಗಳಷ್ಟು ಕಡತಗಳನ್ನು ಪರಿಶೀಲಿಸಲಾಗಿದೆ. 25 ಸಾವಿರದ 238 ಪುಟದ ಸಮಗ್ರ ವರದಿ ತಯಾರಿಸಲಾಗಿದೆ. ಒಟ್ಟಾರೆ ಅಕ್ರಮ ಗಣಿಗಾರಿಕೆಯಿಂದ 2006 ರಿಂದ 2011ರ ವರೆಗೆ ಆದ ನಷ್ಟ 16, 085 ಕೋಟಿ ರು ನಷ್ಟವಾಗಿದೆ.
ಆರೋಪ ಹೊತ್ತವರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಕುಟುಂಬ, ಅನಿಲ್ ಲಾಡ್, ಸಚಿವ ವಿ ಸೋಮಣ್ಣ, ಎಚ್ ಡಿ ಕುಮಾರಸ್ವಾಮಿ(ಎರಡು ಕಂಪನಿಗಳಿಗೆ ಅಕ್ರಮವಾಗಿ ಲೈಸೆನ್ಸ್ ವಿತರಣೆ), ಶ್ರೀ ರಾಮುಲು, ಎಂಎಲ್ ಎ ರಾಜೇಂದ್ರ, ಕೂಡ್ಲಿಗಿ ಶಾಸಕ ನಾಗೇಂದ್ರ, ರೆಡ್ಡಿ ಸೋದರರು ಹಾಗೂ ಇತರರು. ಒಟ್ಟು 600ಕ್ಕೂ ಅಧಿಕ ಜನ ಮತ್ತು 787 ಸರ್ಕಾರಿ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ.
31 ಅಧ್ಯಾಯವಿರುವ ಗಣಿ ವರದಿ ಆಧಾರದ ಮೇಲೆ ಲೋಕಾಯುಕ್ತ ಭ್ರಷ್ಟಾಚಾರ ವಿರೋಧಿ ಕಾಯ್ದೆಯಡಿಯಲ್ಲಿ ಆರೋಪಗಳ ನೇರವಾಗಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಬಹುದಾಗಿತ್ತು. ಆದರೆ, ರಾಜ್ಯಪಾಲರು ಮುಂದಿನ ಕ್ರಮ ಜರುಗಿಸುತ್ತಾರೆ ಎಂದು ಸಂತೋಷ್ ಹೆಗ್ಡೆ ಹೇಳಿರುವುದು ಅಚ್ಚರಿ ಮೂಡಿಸಿದೆ. ಇದು ತನಿಖಾ ವರದಿ ಮಾತ್ರ, ಯಾವುದೇ ಶಿಫಾರಸ್ಸು ಮಾಡಿಲ್ಲ ಎಂದು ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications