ಅಕ್ರಮ ಗಣಿಗಾರಿಕೆ ವರದಿ ಸಲ್ಲಿಕೆಗೆ ಕ್ಷಣಗಣನೆ
ಬೆಂಗಳೂರು,
ಜು. 27 : ಅಕ್ರಮ ಗಣಿಗಾರಿಕೆ ವರದಿಯ ಸಲ್ಲಿಕೆಗೆ ಕ್ಷಣಗಣನೆ ಆರಂಭವಾಗಿದೆ. ಭಾರೀ ಬಿಗಿಭದ್ರತೆಯಲ್ಲಿ 3 ಸೂಟ್ ಕೇಸುಗಳಲ್ಲಿ ಹಿರಿಯ ಅರಣ್ಯಾಧಿಕಾರಿ ಯು.ವಿ. ಸಿಂಗ್ ಅವರು ಲೋಕಾಯುಕ್ತ ಬಹುಮಹಡಿ ಕಟ್ಟಡದಲ್ಲಿರುವ ಕಚೇರಿಗೆ ತಂದಿದ್ದು, ಕೆಲವೇ ಕ್ಷಣಗಳಲ್ಲಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಅಂಕಿತ ಹಾಕಲಿದ್ದಾರೆ. id="toptextpromo">ಲೋಕಾಯುಕ್ತ
ರಿಜಿಸ್ಟ್ರಾರ್ ಮೂಸಾ ಕುನ್ಹಿ ನಾಯರ್ ಮೂಲೆ ಅವರು ಮಧ್ಯಾಹ್ನ ಅಂದಾಜು 3.30ಕ್ಕೆ ಸರಕಾರದ ಪ್ರಧಾನ ಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರಿಗೆ ತಲುಪಿಸಲಿದ್ದಾರೆ. ಅಕ್ರಮ ಗಣಿಗಾರಿಕೆಯ ವರದಿಯನ್ನು ಎಲ್ಲಿ ಸಿದ್ಧಪಡಿಸಲಾಗಿದೆ ಮತ್ತು ಎಲ್ಲಿ ಪ್ರಿಂಟ್ ಮಾಡಲಾಗಿದೆ ಎಂಬ ಅಂಶವನ್ನು ಅತ್ಯಂತ ಗೌಪ್ಯವಾಗಿಡಲಾಗಿತ್ತು. id='are-slot-1' class='oiad oi-axt oiadv'> id='top-searched-articles'>ಅಂತಿಮ
ವರದಿಯಲ್ಲಿ ಯಾವ್ಯಾವ ರಾಜಕಾರಣಿಗಳು, ಅಧಿಕಾರಿಗಳ ಹೆಸರುಗಳು ಬಹಿರಂಗವಾಗಲಿವೆ ಎಂಬುದು ತಿಳಿಯಲಿದೆ. ಈಗಾಗಲೆ ಇಡೀ ರಾಜ್ಯ ರಾಜಕೀಯದ ಎದೆಬಡಿತ ಹೆಚ್ಚಾಗಿದೆ, ಒಂದು ರೀತಿಯ ಅಸಹನೀಯ ಮೌನ ಆವರಿಸಿಕೊಂಡಿದೆ. ಎಲ್ಲ ರಾಜಕೀಯ ಪಕ್ಷಗಳ ನಾಯಕರ ಹೆಸರುಗಳೂ ಕೇಳಿಬಂದಿರುವುದರಿಂದ ಯಾರೂ ತುಟಿ ಬಿಚ್ಚುತ್ತಿಲ್ಲ.











Click it and Unblock the Notifications