ಸಂಕಟ ಬಂದಾಗ ವೆಂಕಟರಮಣನ ನೆನೆದ ಯಡಿಯೂರಪ್ಪ

BS Yeddyurappa Off to irumala Tirupati Devasthanam
ಬೆಂಗಳೂರು ಜು 26: ಅಕ್ರಮ ಗಣಿಗಾರಿಕೆ ಕುರಿತ ವರದಿಯನ್ನು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಬುಧವಾರ(ಜು.26) ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ನಾಳೆ ಸಂಜೆ ಬಿಜೆಪಿ ಸಮನ್ವಯ ಸಭೆ ನಡೆಯಲಿದೆ. ಈ ನಡುವೆ ಸೋರಿಕೆಯಾಗಿರುವ ವರದಿಯಂತೆ ಆರೋಪ ಹೊತ್ತಿರುವ ಯಡಿಯೂರಪ್ಪ ಅವರು ತಮ್ಮ ಆಪ್ತ ಪರಿವಾರ ಸಮೇತ ತಿರುಪತಿ ದೇವಸ್ಥಾನಕ್ಕೆ ತೆರಳುತ್ತಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಆಪ್ತ ಸಚಿವರು ಹಾಗೂ ಶಾಸಕರ ಜೊತೆಗೂಡಿ ತಿರುಮಲಕ್ಕೆ ತೆರಳಿ ತಿರುಪತಿ ಶ್ರೀವೆಂಕಟೇಶ್ವರನ ದರ್ಶನ ಪಡೆದು ತಮ್ಮ ಸಂಕಟವನ್ನು ನೀಗುವಂತೆ ಪ್ರಾರ್ಥಿಸಲಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ಹೇಳಿವೆ. ಆದರೆ, ಈ ಕಾರ್ಯಕ್ರಮ ಯಾವುದೇ ಸಮಯದಲ್ಲಿ ಬದಲಾವಣೆಯಾಗುವ ಸಾಧ್ಯತೆಯೂ ಇದೆ.

ದೈವಕ್ಕೆ ಶರಣೆಂದ ಯಡಿಯೂರಪ್ಪ: ಮಾರಿಷಸ್ ನಿಂದ ಬಂದ ತಕ್ಷಣ ಮಲ್ಲೇಶ್ವರದ ಸುಬ್ರಮಣ್ಯ ದೇಗುಲಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ, ಆಡಿ ಕೃತಿಕಾ ಮಹೋತ್ಸವದ ಮಹಾ ಪ್ರಸಾದವನ್ನು ಸ್ವೀಕರಿಸದ ನಂತರವೇ ಸುದ್ದಿಗೋಷ್ಠಿ ನಡೆಸಿದ್ದರು.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಯಡಿಯೂರಪ್ಪ ಆವರ ಮೇಲಿರುವ ಆರೋಪಗಳನ್ನು ಪರಿಶೀಲಿಸಿ, ರಾಜೀನಾಮೆ ಕೇಳಲು ಬಿಜೆಪಿ ಹೈಕಮಾಂಡ್ ಸಿದ್ಧತೆ ನಡೆಸಿದೆ. ಇದಕ್ಕೆ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಕೂಡಾ ಸಮ್ಮತಿ ಕೊಟ್ಟಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+