ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಣ್ಣಗಾದ ಡಿಎಂಕೆ ಕಾರ್ಯಕಾರಿಣಿ: ಕರುಣಾನಿಧಿಯೇ ಅಧಿಪತಿ

By Srinath
|
Google Oneindia Kannada News

DMK General Council meeting
ಕೊಯಮತ್ತೂರು, ಜುಲೈ25: ಕರುಣಾನಿಧಿಯೇ ಪಕ್ಷದ ನೇತೃತ್ವ ವಹಿಸಿಕೊಳ್ಳಬೇಕು ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮುಂದುವರಿಸಬೇಕು ಎಂದು ಡಿಎಂಕೆ ಮಹಾಮಂಡಳಿ ಸಭೆಯಲ್ಲಿ ಭಾನುವಾರ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಕೇಂದ್ರ ಸಚಿವ ಸಂಪುಟದಲ್ಲಿ ಖಾಲಿ ಇರುವ ಡಿಎಂಕೆಗೆ ಮೀಸಲಾದ ಎರಡು ಸ್ಥಾನಗಳನ್ನು ತುಂಬುವ ಬಗ್ಗೆ ಮೌನ ವಹಿಸಲಾಗಿದೆ.

2ಜಿ ತರಂಗಾಂತರ ಹಂಚಿಕೆ ಹಗರಣದ ಆರೋಪ ಹೊತ್ತಿರುವ ಎ.ರಾಜಾ ಮತ್ತು ದಯಾನಿಧಿ ಮಾರನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿ ಉಳಿದಿವೆ.

ಇತ್ತೀಚೆಗೆ ನಡೆದ ಕೇಂದ್ರ ಸಂಪುಟ ಪುನರ್ ರಚನೆಯ ಸಂದರ್ಭದಲ್ಲೂ ಈ ಸ್ಥಾನಗಳಿಗೆ ತಮ್ಮ ಸಂಸದರ ಹೆಸರನ್ನು ಡಿಎಂಕೆ ಸೂಚಿಸಲಿಲ್ಲ. ಪಕ್ಷದ ಮಹಾಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಪ್ರಧಾನಿಗೆ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಕರುಣಾನಿಧಿ ಹೇಳಿದ್ದರು. ಆದರೆ ಶನಿವಾರ ಆರಂಭವಾದ ಎರಡು ದಿನಗಳ ಸಭೆಯಲ್ಲಿ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಮಹಾಮಂಡಳಿ ಸಭೆ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವ ವಹಿಸಿಕೊಳ್ಳುವ ಕುರಿತು ಕರುಣಾನಿಧಿ ಅವರ ಪುತ್ರರೂ ಆದ ಪಕ್ಷದ ಖಜಾಂಚಿ ಎಂ.ಕೆ. ಸ್ಟಾಲಿನ್ ಮತ್ತು ಕೇಂದ್ರದಲ್ಲಿ ಸಂಪುಟ ದರ್ಜೆ ಸಚಿವರಾಗಿರುವ ಎಂ.ಕೆ. ಅಳಗಿರಿ ನಡುವೆಯೇ ತೀವ್ರ ಪೈಪೋಟಿ ನಡೆದಿತ್ತು.

ತಮ್ಮ ಪುತ್ರರ ಬೆಂಬಲಿಗರಲ್ಲಿ ಉಂಟಾದ ವೈಮನಸ್ಯದಿಂದ ವ್ಯಾಕುಲಗೊಂಡ ಕರುಣಾನಿಧಿ, ಮಹಾಮಂಡಳಿಯು ತಾವು ಪಕ್ಷದ ಅಧ್ಯಕ್ಷ ಸ್ಥಾನ ತೊರೆಯಬೇಕೆಂದು ಬಯಸುತ್ತದೆಯೇ? ಎಂದು ಕೇಳಿದರು. ಬಳಿಕ ಸಭೆಯು ಕರುಣಾನಿಧಿ ಅವರ ನಾಯತ್ವದಲ್ಲಿ ಮುನ್ನಡೆಯುವ ನಿರ್ಧಾರ ತೆಗೆದುಕೊಂಡಿತು.

English summary
The DMK has decided against nominating representatives for berths in the union cabinet left vacant after its ministers resigned, party president M.Karunanidhi said on Sunday at Coimbatore but added the alliance with the Congress will continue. Karuna to continue as DMK chief: General Council
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X