ಪತಿಯ ರಕ್ಷಿಸಿದ ಸಾಧ್ವಿ: ಮರ್ಡೋಕ್ ಪತ್ನಿಗೆ ಟೈಮ್ಸ್ ಶಹಬ್ಬಾಸ್‌ಗಿರಿ!

ಮಾಧ್ಯಮ ದೊರೆ ರೂಪರ್ಟ್ ಮರ್ಡೋಕ್ ಇತ್ತೀಚೆಗೆ ವಿವಾದಕ್ಕೆ ಸಿಲುಕಿದ್ದಾರೆ. ಇದನ್ನೇ ನೆಪವಾಗಿರಿಸಿಕೊಂಡು ಮರ್ಡೋಕ್ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ವ್ಯಕ್ತಿಯೊಬ್ಬ ಅವರ ಮೇಲೆ ಹಲ್ಲೆಗೆ ಯತ್ನಿಸಿದ. ಆಗ ಮರ್ಡೋಕ್ ಅವರ ಪತ್ನಿ ವೆಂಡಿ ಡೆಂಗ್ ಪತಿಯನ್ನು ರಕ್ಷಿಸಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿರುವ ಟೈಮ್ ಮ್ಯಾಗಝಿನ್ 'ಟಾಪ್ 10 ಡೇರ್ ಡೆವಿಲ್ ಪತ್ನಿಯರ ಪಟ್ಟಿ' ಕಟ್ಟಿದೆ, ಅಷ್ಟೆ.
ಇದನ್ನೇ ನೆಪವಾಗಿಟ್ಟುಕೊಂಡು ವೆಂಡಿ ಡೆಂಗ್ ಬಗ್ಗೆ ನಾವೂ ಒಂದಿಷ್ಟು ತಿಳಿದುಕೊಳ್ಳುವ...
ವೆಂಡಿ ಡೆಂಗ್ ಎಂಬ ಈ ಮಹಿಳೆ ಪೂರ್ವ ಚೀನಾದ ಕ್ಸುಜ್‌ಹೌ ಎಂಬ ಪಟ್ಟಣದಲ್ಲಿ ಫ್ಯಾಕ್ಟರಿ ಮ್ಯಾನೇಜರ್ ಒಬ್ಬರ ಮಗಳು. 1968ರಲ್ಲಿ ಹುಟ್ಟಿದ ಈಕೆ 19ನೇ ವಯಸ್ಸಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೆರಿಕಕ್ಕೆ ತೆರಳಿದಳು. ಕ್ಯಾಲಿಫೋರ್ನಿಯಾದಲ್ಲಿ ಜೇಕ್ ಮತ್ತು ಜಾಯ್ಸ್ ಚೆರ್ರೆ ದಂಪತಿಯ ಪರಿಚಯವೂ ಆಯಿತು. ಡೆಂಗ್ ಆರಂಭದಲ್ಲಿ ಇವರ ಮನೆಯಲ್ಲಿಯೇ ನೆಲೆಸಿದ್ದಳು. ಆದರೆ ಅಲ್ಲಿ ಜೇಕ್ ಜತೆ ಈಕೆಗೆ ಪ್ರಣಯ ಬೆಳೆಯಿತು. ಒಂದು ದಿನ ಇದು ಜಾಯ್ಸ್ ಕಣ್ಣಿಗೂ ಬಿತ್ತು. ಡೆಂಗ್ ಅನಿವಾರ್ಯವಾಗಿ ಆ ಮನೆ ತೊರೆಯಬೇಕಾಯಿತು.
ಆದರೂ ಜೇಕ್- ಡೆಂಗ್ ಜೋಡಿಯ ಡಿಂಗ್ ಡಾಂಗ್ ನಿಲ್ಲಲಿಲ್ಲ. ಅವರಿಬ್ಬರೂ ಮದುವೆಯೂ ಆದರು. ಅದು ಮೂರು ವರ್ಷ ಕೂಡ ಬಾಳಲಿಲ್ಲ. ಈ ಅವಧಿಯಲ್ಲಿ ಡೆಂಗ್ ಅಮೆರಿಕ ಪೌರತ್ವ ಪಡೆದಿದ್ದಳು.
ಯೇಲ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ 1996ರಲ್ಲಿ ಪದವಿ ಪಡೆದ ಈಕೆ ಸ್ಟಾರ್ ಟಿ.ವಿ. ಚಾನೆಲಿನಲ್ಲಿ ತರಬೇತಿಗೆ ಸೇರಿದಳು. ಆ ಸಂದರ್ಭದಲ್ಲಿ ಕಂಪನಿ ಆಯೋಜಿಸಿದ್ದ ಕಾಕ್‌ಟೇಲ್ ಪಾರ್ಟಿಯಲ್ಲೇ, ತನ್ನ ಭಾವಿ ಪತಿ, ಸಿರಿವಂತ ಮುರ್ಡೋಕ್‌ನನ್ನು ಈಕೆ ಮೊತ್ತಮೊದಲಿಗೆ ಭೇಟಿ ಮಾಡಿದ್ದು. ಆಗ ಮುರ್ಡೋಕ್ ತಮ್ಮ ಎರಡನೇ ಪತ್ನಿ ಅನ್ನಾ ಜತೆ ಬಾಳ್ವೆ ನಡೆಸುತ್ತಿದ್ದರು. ನಂತರ ಮಹತ್ವಾಕಾಂಕ್ಷಿ ಡೆಂಗ್, ಮುರ್ಡೋಕ್ ಒಡೆತನದ ಹಾಂಕಾಂಗ್ ಘಟಕ ಸ್ಟಾರ್ ಟೆಲಿವಿಷನ್‌ನಲ್ಲಿ ಕೆಲಸಕ್ಕೂ ಸೇರಿದಳು.
ಡೆಂಗ್- ಮುರ್ಡೋಕ್ ಪರಿಚಯ ಪ್ರೇಮವಾಗಿ ಇಬ್ಬರೂ 1999ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮುರ್ಡೋಕ್ ತಮ್ಮ ನಿವೃತ್ತ ಜೀವನ ಕಳೆಯಲೆಂದೇ ಕೊಂಡುಕೊಂಡಿದ್ದ ವಿಹಾರದೋಣಿಯಲ್ಲಿ ಇವರು ಮದುವೆಯಾಗಿದ್ದು ಮತ್ತೊಂದು ವಿಶೇಷ.
ಈಗ ಪತಿ ಮೇಲೆ ಹಲ್ಲೆ ತಡೆಯಲು ಧಾವಿಸಿದ ನಂತರ ಜಗತ್ತಿನ ಗಮನ ಸೆಳೆದಿದ್ದರೂ ಅದಕ್ಕೆ ಮುಂಚಿನಿಂದಲೂ ತಮ್ಮ ಪತಿಯ ಮಾಧ್ಯಮ ವಹಿವಾಟಿನಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಬಂದಿದ್ದಾಳೆ. ಕಂಪನಿಯಲ್ಲಿ ಈಕೆಗೆ ಯಾವುದೇ ಅಧಿಕೃತ ಹುದ್ದೆ ಇಲ್ಲದಿದ್ದರೂ ತಮ್ಮ ಪತಿಯ ವ್ಯವಹಾರದಲ್ಲಿ ಸದಾ ಸಕ್ರಿಯಳು.
42 ವರ್ಷದ ಡೆಂಗ್ ಹಾಗೂ ಆಕೆಗಿಂತ 38 ವರ್ಷ ಹಿರಿಯ ಮುರ್ಡೋಕ್ ದಂಪತಿಗೆ ಗ್ರೇಸ್ ಮತ್ತು ಕ್ಲೋ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತಮ್ಮ ಆಸ್ತಿಯಲ್ಲಿ ಭಾರಿ ಪಾಲನ್ನು ಈ ಮಕ್ಕಳಿಗೆ ಮುರ್ಡೋಕ್ ವಿಲ್ ಕೂಡ ಬರೆದಿದ್ದಾರೆ. ಡೆಂಗ್ ಬಗ್ಗೆ ಇದೀಗ ಅಂತರ್ಜಾಲದಲ್ಲೂ ಸಾಕಷ್ಟು ಪ್ರಶಂಸೆಯ ಉದ್ಗಾರಗಳು ಹೊರಹೊಮ್ಮಿವೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications