ಟೈಮ್ಸ್ ಡೇರ್ ಡೆವಿಲ್ ಪತ್ನಿಯರ ಪಟ್ಟಿಯಲ್ಲಿ ಝಾನ್ಸಿ ರಾಣಿ

ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ರೂಪರ್ಟ್ ಮರ್ಡೋಕ್‌ರ ಮುಖಕ್ಕೆ ಕೇಕ್ ಎಸೆದ ವ್ಯಕ್ತಿಯ ವಿರುದ್ಧ ಮರ್ಡೋಕ್ ಪತ್ನಿ ವೆಂಡಿ ಡೆಂಗ್ ಹಲ್ಲೆ ಮಾಡಿದ್ದರು. ಇದರ ಹಿನ್ನೆಲೆಯಲ್ಲಿ ಮ್ಯಾಗಝಿನ್ ಈ ಪಟ್ಟಿಯನ್ನು ತಯಾರಿಸಿದೆ.
ಅಮೆರಿಕದ ಪ್ರಥಮ ಮಹಿಳೆ ಮಿಶೆಲ್, ರಿಪಬ್ಲಿಕನ್ ನಾಯಕಿ ಸಾರಾ ಪಾಲಿನ್, ಪ್ರಾಚೀನ ಈಜಿಪ್ಟ್ ರಾಣಿ ಕ್ಲಿಯೋಪಾತ್ರ, ಟೈಗರ್ ವುಡ್ಸ್‌ರ ಮಾಜಿ ಪತ್ನಿ ಎಲಿನ್ ನಾರ್ಡಿಗ್ರೆನ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಸ್ಪೇನ್‌ನ ಐತಿಹಾಸಿಕ ರಾಣಿ ಇಸಾಬೆಲ, ಅಮೆರಿಕದ ಮಾಜಿ ಪ್ರಥಮ ಮಹಿಳೆ ಎಲೀನಾರ್ ರೂಸ್‌ವೆಲ್ಟ್, ಸಲಿಂಗ ವಿವಾಹದ ಪರವಾಗಿ ಹೋರಾಡಿದ ಎಲೆನ್ ಡಿ ಜನರೆಸ್ ಮತ್ತು ಪೋರ್ಶಿಯ ಡಿ ರೋಸಿ, ಜೂನ್ ಕಾರ್ಟರ್ ಕ್ಯಾಶ್ ಮತ್ತು ಮೆಲಿಂಡಾ ಗೇಟ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದವರು.
ಹತ್ತೊಂಬತ್ತನೆ ಶತಮಾನದ ಝಾನ್ಸಿಯ ಯುವ ಹಾಗೂ ವೀರ ರಾಣಿ 1857ರ ಯುದ್ಧದಲ್ಲಿ ಬ್ರಿಟಿಶರ ವಿರುದ್ಧ ವೀರಾವೇಶದಿಂದ ಹೋರಾಡಿ ಮಡಿದಿದ್ದರು. ಕುಲೀನ ಮನೆತನದಲ್ಲಿ ಹುಟ್ಟಿದ ಲಕ್ಷ್ಮಿ ಝಾನ್ಸಿಯ ರಾಜನನ್ನು ಮದುವೆಯಾದ ಬಳಿಕ ದುರದೃಷ್ಟಕ್ಕೀಡಾದರು. ಆಕೆಯ ಮಗ ಸತ್ತನು, ಬಳಿಕ ಗಂಡ ಮೃತಪಟ್ಟರು.
ಉತ್ತರಾಧಿಕಾರಿಯಿಲ್ಲ ಎಂಬ ಕಾರಣ ನೀಡಿ ಜೊತೆಗೆ 'ದತ್ತು ಮಕ್ಕಳಿಗೆ ಹಕ್ಕಿಲ್ಲ' 1853ರಲ್ಲಿ ಆಕೆಯ ರಾಜ್ಯವನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ವಶಪಡಿಸಿಕೊಂಡಿತು.
ಆದರೆ, ನಾಲ್ಕು ವರ್ಷಗಳ ಬಳಿಕ ಆಕೆಯ ನೇತೃತ್ವದಲ್ಲಿ ಈಸ್ಟ್ ಇಂಡಿಯಾ ಕಂಪೆನಿ ವಿರುದ್ಧ ಹಿಂಸಾತ್ಮಕ ಬಂಡಾಯ ನಡೆಯಿತು. ನೇರವಾಗಿ ಯುದ್ಧದಲ್ಲಿ ಭಾಗವಹಿಸಿದ ಲಕ್ಷ್ಮಿಬಾಯಿ ತನ್ನ ಗಂಡನ ರಾಜ್ಯದ ಪರವಾಗಿ ಹೋರಾಟ ನಡೆಸಿದರು. ಆದರೆ, ಅವರು ಆ ಯುದ್ಧದಲ್ಲಿ ಮಡಿದರು. ಆಗ ಅವರಿಗೆ ಕೇವಲ 22 ವರ್ಷ.












Click it and Unblock the Notifications