ದಾವಣಗೆರೆಯಲ್ಲಿ ಸೋದರಮಾವನಿಂದ ಶಿಕ್ಷಕಿ ಅತ್ಯಾಚಾರ

ಚಂದ್ರು ಎಂಬಾತನೇ ನತದೃಷ್ಟ ಮಹಿಳೆಯ ಮೇಲೆ ಪೌರುಷ ತೋರಿಸಿದ ಸೋದರಮಾವ. ಆದರೆ ಅತ್ಯಾಚಾರಕ್ಕೊಳಗಾಗಿರುವ ಸುಜಾತಾ ತನ್ನ ಸೋದರಮಾವನೇ ಮದುವೆಯಾಗಬೇಕೆಂದು ಹಠ ಹಿಡಿದಿದ್ದಾಳೆ.
ಮದುವೆಯ ಪ್ರಸ್ತಾಪ ಬಂದಾಗ, ಮದುವೆಯಾಗಲ್ಲ ಬೇಕಿದ್ದರೆ 5 ಲಕ್ಷ ರು. ಕೊಡುತ್ತೇನೆಂದು ಆಮಿಷವೊಡ್ಡಿದ್ದಾನೆ. ಆಗಲ್ಲ, ಮದುವೆ ಆಗಲೇಬೇಕು ಎಂದು ಸುಜಾತಾ ಪಟ್ಟುಹಿಡಿದಾಗ ಚಂದ್ರು ಈಗ ಅಮವಾಸ್ಯೆ ಚಂದ್ರನಂತಾಗಿದ್ದಾನೆ.
ಘಟನೆಯ ವಿವರ : ಶಾಲಾ ಶಿಕ್ಷಕಿಯಾಗಿರುವ ಸುಜಾತಾ ಚಂದ್ರು ಮನೆಯಲ್ಲಿಯೇ ವಾಸ್ತವ್ಯ ಹೂಡಿದ್ದಳು. ಕುಮಾರಮಂಗಲಂ ಬಿರ್ಲಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಚಂದ್ರು, ಯಾರೂ ಇಲ್ಲದ ಸಮಯದಲ್ಲಿ ಆಕೆಯ ತಲೆಯ ಮೇಲೆ ಹೊಡೆದು ಮಾನಭಂಗ ಮಾಡಿದ್ದಾನೆ.
ಇದರಿಂದ ಬೇಸತ್ತ ಸುಜಾತಾ ತುಂಗಭದ್ರಾ ನದಿಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಆದರೆ, ಸಹೋದ್ಯೋಗಿಗಳು ಆಕೆಯನ್ನು ಉಳಿಸಿದ್ದಾರೆ. ಚಂದ್ರು ಇನ್ನೂ ಇಬ್ಬರು ಯುವತಿಯರನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪವೂ ಇದೆ.












Click it and Unblock the Notifications