ರಾತ್ರಿ 10ಕ್ಕೇ ಲೋಕಾಯುಕ್ತ 'ಗಣಿಗಾರಿಕೆ' ವರದಿ ಸ್ಫೋಟಿಸಿದ ದಟ್ಸ್ ಕನ್ನಡ

illegal mining report leaked- public astonished,
ಬೆಂಗಳೂರು, ಜುಲೈ21: ರಾಜ್ಯದಲ್ಲಿ 2000 ದಿಂದ 2006ರ ಜುಲೈವರೆಗೆ ನಡೆದಿದೆಯೆನ್ನಲಾದ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖಾ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗುವ ಮುನ್ನವೇ ಸೋರಿಕೆಯಾಗಿದ್ದು, ಇಡೀ ರಾಜ್ಯದಲ್ಲಿ ಸಂಚಲನವನ್ನುಂಟುಮಾಡಿದೆ.

ನಿಮ್ಮ ನೆಚ್ಚಿನ 'ದಟ್ಸ್ ಕನ್ನಡ' ಒಂದಿನಿತೂ ತಡಮಾಡದೆ ಬುಧವಾರ ರಾತ್ರಿ 10ಕ್ಕೇ ವರದಿ ಸ್ಫೋಟಿಸಿದೆ. ಹೌದು, ಅದೇ ವೇಗದೊಂದಿಗೆ ತಾಜಾ ಸುದ್ದಿಗಳನ್ನು ಕ್ಷಣಕ್ಷಣಕ್ಕೂ ನಿಮ್ಮ ಮುಂದಿಡಲು 'ದಟ್ಸ್ ಕನ್ನಡ' ಸಜ್ಜಾಗಿದೆ. ವರದಿಗಳ ಮಹಾಪೂರವೇ ಹರಿದುಬರಲಿದೆ... ನಿರೀಕ್ಷಿಸಿ.

ಕುತೂಹಲಕಾರಿ ಸಂಗತಿಯೆಂದರೆ ಲೋಕಾಯುಕ್ತರ ಅಕ್ರಮ ಗಣಿಗಾರಿಕೆ ವರದಿಗಿಂತ ಸದ್ಯದ ಮಟ್ಟಿಗೆ ವರದಿ ಸೋರಿಕೆಯಾಗಿರುವುದೇ ಭಾರಿ ಸ್ಫೋಟವನ್ನುಂಟುಮಾಡಿದೆ. ಬೆಳ್ಳಂಬೆಳಗ್ಗೆ ದಿನಪತ್ರಿಕೆಗಳನ್ನು ತಿರುವಿಹಾಕುತ್ತಿದ್ದಂತೆ ಜನ ನಮ್ಮ ಜನನಾಯಕರ ಗಣಿ ಅಕ್ರಮಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಿಕೊಳ್ಳುತ್ತಿದ್ದಾರೆ.

ಪಕ್ಷಬೇಧ ಮರೆತು ಬಹುತೇಕ ಎಲ್ಲ ರಾಜಕಾರಣಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಸುದ್ದಿಗಳು ಜನರನ್ನು ಚಿಂತೆಗೀಡುಮಾಡಿದೆ. 'ಛೀ, ಥೂ! ಇವನೆಂಥಾ ನಮ್ಮ ಜನನಾಯಕನಪ್ಪ' ಎಂದು ಬಹುತೇಕ ಎಲ್ಲ ರಾಜಕಾರಣಿಗಳ ಬಗ್ಗೆಯೂ ಮನಸಾರೆ ಬೈದಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಸಲ್ಲಿಸಲಿರುವ ಈ ವರದಿ ಸೋರಿಕೆಯಾಗಿರುವುದು ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+