ನಿತೀಶ್ ಕುಮಾರ್ ಕೊರಳಿಗೂ ಸುತ್ತಿಕೊಂಡ ಭೂ ಹಗರಣ
ಪಟನಾ,
ಜುಲೈ21: ಕರ್ನಾಟಕದಲ್ಲಿ ಕೆಐಎಡಿಬಿ ಅಕ್ರಮ ಮಾದರಿಯಲ್ಲೇ ಬಿಹಾರದ ಕೈಗಾರಿಕಾ ಅಭಿವೃದ್ಧಿ ಮಂಡಳಿ ಕೂಡಾ ಭೂ ಹಗರಣ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಲಕ್ಷಣವಾಗಿ ಕುಂತು ಕಂಠಮಟ್ಟ ಭೂಮಿಯನ್ನು ತಿಂದಿದ್ದಾರೆ. ಅವರ ಸಂಪುಟದ ಸಚಿವರು, ಕೆಲ ಸಂಸದರು ಹಾಗೂ ಅವರ ಬಂಧುಗಳಿಗೆ ಅಮೂಲ್ಯ ಭೂಮಿ ಮಂಜೂರು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. id="toptextpromo">ಈ
ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಒತ್ತಾಯಿಸಿವೆ. ಈ ವಿಷಯವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಮೂರನೇ ದಿನವಾದ ಗುರುವಾರವೂ ವಿಧಾನಸಭೆ ಕಲಾಪಕ್ಕೆ ಭಂಗ ತಂದಿದೆ. id='are-slot-1' class='oiad oi-axt oiadv'> id='top-searched-articles'>ವಿಧಾನಸಭೆ
ಕಲಾಪ ಆರಂಭವಾಗುತ್ತಲೇ ಭೂಹಗರಣದ ಬಗ್ಗೆ ಪ್ರಸ್ತಾಪಿಸಿದ ವಿಪಕ್ಷ ಕಾಂಗ್ರೆಸ್, ಆರ್ಜೆಡಿ ಮತ್ತು ಎಲ್‌ಜೆಪಿ ಸದಸ್ಯರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಸರ್ಕಾರ ಕೂಡಲೇ ಅಧಿಕಾರ ಬಿಟ್ಟು ಕೆಳಗಿಳಿಯಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ವಿಚಾರಣೆ ನಡೆಸುವುದಾಗಿ ಸಭಾಧ್ಯಕ್ಷ ಮತ್ತು ಕೆಲ ಹಿರಿಯ ಸಚಿವರು ಮನವಿ ಮಾಡಿದರಾದರೂ ವಿಪಕ್ಷಗಳ ಸದಸ್ಯರು ಅದನ್ನು ಆಲಿಸಿಕೊಳ್ಳದೇ ಗದ್ದಲ ಎಬ್ಬಿಸಿದರು. ಹೀಗಾಗಿ ಕಲಾಪವನ್ನು ಮುಂದೂಡಬೇಕಾಯಿತು.











Click it and Unblock the Notifications