ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ರೇಣುಕಾಚಾರ್ಯ ಕಂಡ ಹಸಿ ಹಸಿ ಕನಸು

By Mahesh
|
Google Oneindia Kannada News

Renukacharya dream
ಬೆಂಗಳೂರು, ಜು.19: ಪ್ರಶಸ್ತಿ ಪ್ರಧಾನ ಸಮಾರಂಭ...ಮುಖ್ಯಮಂತ್ರಿಗಳು ರೇಣುಕಾಚಾರ್ಯರ ಬೆನ್ನು ಚಪ್ಪರಿಸುತ್ತಿದ್ದಾರೆ. ನೆರೆದಿದ್ದ ಹಳ್ಳಿಗರ ಮುಖದಲ್ಲಿ ಸಂತೋಷ ಉಕ್ಕಿ ಹರಿಯುತ್ತಿದೆ. ಅಂದುಕೊಂಡಿದ್ದನ್ನು ಸಾಧಿಸಿದ ಖುಷಿಯಲ್ಲಿ ರೇಣುಕಾಚಾರ್ಯ ರಾತ್ರಿ ಪಾರ್ಟಿ ಮಾಡುತ್ತಿದ್ದಾರೆ..ಅಷ್ಟರಲ್ಲಿ..ಥುತ್ ಯಾವನ್ಲೇ ಅವನು.. ಎಂದು ಹೊದಿಕೆ ಕೆಡವುತ್ತಾ ರೇಣುಕಾ ಮಂಚದಿಂದ ಕೆಳಗೆ ಉದುರುತ್ತಾರೆ. ರೇಣುಕಾ ಕಂಡ ಕನಸು ಅಲ್ಲಿಗೆ ಮುಗಿಯುತ್ತದೆ.

ಇಷ್ಟಕ್ಕೂ ರೇಣುಕಾಜಿ ಕಂಡ ಕನಸು, ಕಾಣುತ್ತಿರುವ ಕನಸು ಆಗಷ್ಟ್ 15ರೊಳಗೆ ರಾಜ್ಯವನ್ನು ಕಳ್ಳಭಟ್ಟಿ ಮುಕ್ತವನ್ನಾಗಿಸುವುದು. ಚಾಮರಾಜನಗರ ಜಿಲ್ಲೆ ಅಭಿವೃದ್ಧಿ ಪಡಿಸಿ ರಾಜ್ಯದಲ್ಲೇ ನಂ.1 ಮಾಡುವುದು ಇದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಪಿ ರೇಣುಕಾಚಾರ್ಯ ಅವರ ಆಸೆ.

ಅಬಕಾರಿ ಮಾಫಿಯಾ ವಿರುದ್ಧ ಹೋರಾಡಲು ಇಲಾಖೆಗೆ ಬೇಕಾಗಿರುವ ಅಗತ್ಯ ಶಸ್ತ್ರಗಳನ್ನು ಖರೀದಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಜು.19ರ ನಂತರ ಗೋವಾ, ಮಹಾರಾಷ್ಟ ಹಾಗೂ ಆಂಧ್ರಪ್ರದೇಶದ ಅಬಕಾರಿ ಸಚಿವರನ್ನು ಭೇಟೀ ಮಾಡಿ ಅಕ್ರಮ ಮದ್ಯ ಪೂರೈಕೆಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಸುಮಾರು 830 ಅಕ್ರಮ ಮದ್ಯ ತಯಾರಿಕಾ ಘಟಕಗಳನ್ನು ಧ್ವಂಸಗೊಳಿಸಲಾಗಿದೆ. ಅಬಕಾರಿ ಇಲಾಖೆ ನವೀಕರಣಕ್ಕೆ 100 ಕೋಟಿ ರೂ ಹೆಚ್ಚಿನ ಅನುದಾನ ಸಿಕ್ಕಿದೆ. ತಮಕೂರಿನ ಸಿರಾ ತಾಲೂಕಿನ 70 ಎಕರೆ ಭೂ ಪ್ರದೇಶದಲ್ಲಿ ಅಬಕಾರಿ ಅಕಾಡೆಮಿ ಸ್ಥಾಪಿಸಲಾಗುವುದು ಎಂದು ಸಚಿವ ರೇಣುಕಾ ಹೇಳಿದರು.

English summary
Karnataka Excise Minister Renukacharya said his dream is to see Karnataka as Illicit liquor Free state by August 15. Excise department is now equipped with new arms to battle against illegal liquor mafia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X