ಈ ಆರ್ಥಿಕ ವರ್ಷ 60 ಸಾವಿರ ಜನರ ನೇಮಕಾತಿ :ಟಿಸಿಎಸ್

ಕಳೆದ ಜೂನ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿ 11,988 ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದ್ದು 8412 ಮಂದಿ ಕೆಲಸ ತೊರೆದಿದ್ದಾರೆ ಎಂದು ತಿಳಿಸಿದ ಅವರು ಕಂಪೆನಿ ಒಟ್ಟು 2,02,190 ಉದ್ಯೋಗಿಗಳನ್ನು ಹೊಂದಿದೆ ಎಂದು ತಿಳಿಸಿದರು.
ಕೆಲಸ ತೊರೆಯುವವರ ಸಂಖ್ಯೆ ಮೊದಲ ತ್ರೈಮಾಸಿಕದಲ್ಲಿ ಶೇ.14.8ರಷ್ಟು ಆಗಿದ್ದು ಹಿಂದಿನ ತ್ರೈಮಾಸಿಕದಲ್ಲಿ ಶೇ.14.4 ಆಗಿತ್ತು. ಕಂಪನಿ ಮೊದಲ ತ್ರೈಮಾಸಿಕದಲ್ಲಿ 24 ಹೊಸ ಗ್ರಾಹಕರನ್ನು ಪಡೆದಿದೆ ಎಂದೂ ಅವರು ಹೇಳಿದರು.
ಇನ್ಫಿಯನ್ನು ಹಿಂದಿಕ್ಕಿದ ಟಿಸಿಎಸ್ : ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ ಶೇ.27ರಷ್ಟು ಹೆಚ್ಚಳ ದಾಖಲಿಸಿದ್ದು ಇದು ಉದ್ಯಮದ ನಿರೀಕ್ಷೆಗಿಂತಲೂ ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ ಕಂಪನಿ ತನ್ನ ಪ್ರತಿಸ್ಪರ್ದಿ ಇನ್ಫೋಸಿಸ್ ಗಿಂತ ಬಡ್ಡಿ, ತೆರಿಗೆ, ಸವಕಳಿ ಹಾಗೂ ಸಾಲದ ಕಂತಿಗಿಂತ ಹೆಚ್ಚು ಲಾಭ ಗಳಿಸಿದೆ.
ಕಂಪನಿ ಒಟ್ಟು 2,415 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದ್ದು, ಇದು ಹಿಂದಿನ ವರ್ಷದ ಇದೇ ಅವಧಿಗಿಂತ ಶೇ.26.7ರಷ್ಟು ಅಧಿಕವಾಗಿದ್ದು ಹಿಂದಿನ ವರ್ಷ 1,906 ಕೋಟಿ ರೂಪಾಯಿಗಳಷ್ಟು ನಿವ್ವಳ ಲಾಭ ಗಳಿಸಲಾಗಿತ್ತು.












Click it and Unblock the Notifications