ಜಲಲ ಜಲಲ ಜಲಕ್ರೀಡೆ: ಪ್ರತಿಭಟನೆಗೆ ಹೊಸ ಆಯಾಮ

hot-water shortages in Kiev, FEMEN women protest,
ಕೀವ್(ಉಕ್ರೇನ್‌), ಜುಲೈ 15‌: ಫ‌ುಟ್ಬಾಲ್‌ಗೂ, ಬಿಸಿ ನೀರು ಪೂರೈಕೆಗೂ, ಈ ಲಲನಾಮಣಿಯರ ಜಲಲಕ್ರೀಡೆಗೂ ಎತ್ತಣಿಂದೆತ್ತಣ ಸಂಬಂಧವಯ್ಯಾ ಬ್ರಹ್ಮಚಾರಿಯೇ? ಏನಿಲ್ಲ. ಸಾರ್ವಜನಿಕ ಸ್ನಾನ ತಾಣದಲ್ಲಿ ಜಲಕ್ರೀಡೆ ಆಡುತ್ತಿರುವ ಉಕ್ರೇನ್‌ನ ಈ ಸುಂದರ ವನಿತೆಯರು ಪ್ರತಿಭಟನಾ ನಿರತರಾಗಿದ್ದಾರೆ ಅಷ್ಟೆ.

ವಿಷಯ ಏನಪಾ ಅಂದರೆ ಉಕ್ರೇನ್‌ನ ಸೆಂಟ್ರಲ್‌ ಕೀವ್‌ನಲ್ಲಿ ಪ್ರತಿ ಬೇಸಗೆಯಲ್ಲೂ ಸಾರ್ವಜನಿಕ ಬಳಕೆಗಾಗಿ ಸರಬರಾಜಾಗುವ ಬಿಸಿ ನೀರನ್ನು ನಿಲ್ಲಿಸುವುದು ರೂಢಿ. ಆದರೆಈ ಬಾರಿ ಫ‌ುಟ್ಬಾಲ್‌ ಮಹದೌತಣ ಇದೆ. ಸರಿ ಸುಮಾರು 2 ಲಕ್ಷ ಕ್ರೀಡಾ ಪ್ರೇಮಿಗಳು EURO 2012 championship ವೀಕ್ಷಣೆಗೆ ಬರಲಿದ್ದಾರೆ.

ಆ ವೇಳೆ ಎಂದಿನಂತೆ ಬಿಸಿ ನೀರಿನ ಪೂರೈಕೆಯನ್ನು ನಿಲ್ಲಿಸಿಬಿಟ್ಟರೆ ಗತಿಯೇನು ಎಂಬುದು ಈ ಹೆಂಗೆಳೆಯರ ಹುಯಿಲು. ಅದಕ್ಕೆಂದೆ ಈ ವನಿತೆಯರು ಕೂಟ ನಡೆಯಲಿರುವುದರಿಂದ ಬಿಸಿ ನೀರಿನ ಪೂರೈಕೆಯನ್ನು ನಿಲ್ಲಿಸಕೂಡದೆಂದು ಒತ್ತಾಯಿಸಿದ್ದಾರೆ.

ಏನಾರಾ ಆಗಲಿ, ಐರೋಪ್ಯ ಒಕ್ಕೂಟ ದೇಶಗಳನ್ನು ಪ್ರತಿನಿಧಿಸುವ ಬಣ್ಣಗಳನ್ನು ತಮ್ಮ ಮೈಗೆ ಬಳಿದುಕೊಂಡಿರುವ ಈ ಮಹಿಳೆಯರು ಈ ರೀತಿ ಸಾರ್ವಜನಿಕವಾಗಿ ಪ್ರತಿಭಟನಾರ್ಥವಾಗಿ ಜಲಕ್ರೀಡೆಯಲ್ಲಿ ತೊಡಗಿ, ಬ್ರಹ್ಮಚಾರಿಯ ಎದೆ ಜಲ್ಲೆನಿಸಿದ್ದಾರೆ. ಅಂದಹಾಗೆ, ಈ ವನಿತೆಯರು ಮಹಿಳಾ ಹಕ್ಕುಗಳಿಗಾಗಿ ಹೋರಾಡುವ FEMEN ಎಂಬ ಸಂಘದ ಸದಸ್ಯೆಯರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+