ಕೋರ್ಟ್ ಆದೇಶಕ್ಕೂ ಜಗ್ಗದ ಭಗವದ್ಗೀತೆ ಅಭಿಯಾನ

ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟ ಪರ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಭಗವದ್ಗೀತೆ ಬೋಧಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಭಾರತದ ಸಂವಿಧಾನದ ಅನುಚ್ಛೇದ 29 ಮತ್ತು 30 ಹಾಗೂ ಮೂಲಭೂತ ಹಕ್ಕು 19(1)(ಜಿ)ಗೆ ವಿರುದ್ಧವಾಗಿದೆ. ಶಿಕ್ಷಣ ಇಲಾಖೆ ಹೊಸ ನೀತಿ ರೂಪಿಸುವ ಮೊದಲು ಸಮಗ್ರತೆ ಮತ್ತು ಸಮಾನತೆಯನ್ನು ಪರಿಗಣಿಸಬೇಕು ಎಂದಿದ್ದರು.
ಇಸ್ಲಾಂ ಧರ್ಮದ ಕುರಾನ್ ಹಾಗೂ ಕ್ರೈಸ್ತ ಧರ್ಮದ ಬೈಬಲ್ ಗ್ರಂಥವನ್ನು ಬೋಧಿಸಬೇಕೆಂಬ ಒತ್ತಡ ಉದ್ಭವಿಸುತ್ತದೆ ಎಂಬ ವಾದಕ್ಕೆ ತಲೆ ದೂಗಿದ ನ್ಯಾ.ಎಸ್.ಅಬ್ದುಲ್ ನಝೀರ್, ರಾಜ್ಯ ಮತ್ತು ಕೇಂದ್ರ ಸರಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಜೊತೆಗೆ ಶಿಕ್ಷಣ ಕಾಯ್ದೆ ಸೆಕ್ಷನ್ 7(ಜಿ)(3)ಕುರಿತಂತೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.
ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಭಗವದ್ಗೀತೆ ಬೋಧಿಸುವಂತೆ ಜೂ.9ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ಇಮ್ತಿಯಾಝ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.ಸುತ್ತೋಲೆಯನ್ನು ಜಾರಿ ಮಾಡುವಂತೆ ಡಿಡಿಪಿಐ ಹಾಗೂ ಬಿಇಓಗಳು ಶಾಲೆಗಳ ಮುಖ್ಯೋಪಾಧ್ಯಾಯರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು ಕರ್ನಾಟಕ ಶಿಕ್ಷಣ ಕಾಯ್ದೆ-1983ಕ್ಕೆ ವಿರುದ್ಧವಾಗಿದೆ.












Click it and Unblock the Notifications