ಕ್ಯಾಮರಾ ಕಣ್ಣಲ್ಲಿ ನಾಡಿಗೆ ಬಂದ ಕಾಡಾನೆ ಏನ್ ಮಾಡ್ತು?

Photo Exhibition Elephants rampage Mysore
ಮೈಸೂರು ಜು 14: ಕಾಡಾನೆಗಳು ನಾಡಿಗೆ ಬಂದು ದಾಳಿ ಮಾಡಿದ್ದು, ಹಲವರಿಗೆ ಆತಂಕ ವಿಷಯ ಎನಿಸಿದರೆ, ಕೆಲವರಿಗೆ ಅಪರೂಪದ ಅವಕಾಶ ನೀಡಿತ್ತು. ಜೀವದ ಹಂಗು ತೊರೆದು ಆನೆ ಹೋದ ಕಡೆಗೆಲ್ಲಾ ಓಡುತ್ತಾ, ಸುಂದರವಾದ, ಅಪರೂಪದ ಚಿತ್ರಗಳನ್ನು ತೆಗೆದ ಫೋಟೋ ಜರ್ನಲಿಸ್ಟ್ ಗಳು ಸುದ್ದಿಯ ನಡುವೆ ಮರೆಯಾಗೇ ಉಳಿದರು. ಆದರೆ, ಈಗ ಪತ್ರಿಕಾ ಛಾಯಗ್ರಾಹಕರ ಸಾಹಸಮಯ ಪ್ರಯತ್ನವನ್ನು ಸಾರ್ವಜನಿಕರೆದುರು ಮತ್ತೊಮ್ಮೆ ತರಲಾಗುತ್ತಿದೆ.

ಮೈಸೂರಿನ 14 ಪತ್ರಿಕಾ ಛಾಯಗ್ರಾಹಕ ಸ್ನೇಹಿತರು ಮೂರು ದಿನಗಳ ಛಾಯಾಚಿತ್ರ ಪ್ರದರ್ಶನ. ಕಾಡಾನೆಗಳು ನಾಡಿನತ್ತ ಮುಖ ಮಾಡಿದ, ವನ್ಯಜೀವಿ-ಮಾನವ ಸಂಘರ್ಷ ಬಿಂಬಿಸುವ ಕ್ಯಾಮೆರಾ ಕಣ್ಣೋಟ ಸಾರ್ವಜನಿಕರಿಗೆ ಸಿಗಲಿದೆ.

ಉದ್ಘಾಟನೆ: ಬಿ.ಕೆ.ಸಿಂಗ್, ಪಿಸಿಸಿಎಫ್. ವನ್ಯಜೀವಿ, ಬೆಂಗಳೂರು
ಅಧ್ಯಕ್ಷತೆ: ಎಸ್.ಎ.ರಾಮದಾಸ್, ಉಸ್ತುವಾರಿ ಸಚಿವರು
ಕಾಡಾನೆ ಸುತ್ತ ನಾಲ್ಕು ಮಾತು: ಅಜಯ್ ದೇಸಾಯಿ, ಆನೆ ತಜ್ಞರು. ಕೊಯಮತ್ತೂರ್
ಕಿರು ಹೊತ್ತಿಗೆ ಬಿಡುಗಡೆ: ಎಂ, ರಾಜೇಂದ್ರ, ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷರು. ಮೈಸೂರು
ಉಪಸ್ಥಿತಿ: ಅಜಯ್ ಮಿಶ್ರ, ಸಿಸಿಎಫ್ ಆನೆ, ಸವಿತಾ ನಾಗಭೂಷಣ್, ಪಿಎಫ್ಎ

ಸ್ಥಳ: ಸುಚಿತ್ರ ಆರ್ಟ್ ಗ್ಯಾಲರಿ, ಕಲಾಮಂದಿರ ಮೈಸೂರು
ದಿನಾಂಕ: 15/07/2011, ಶುಕ್ರವಾರ ಸಂಜೆ 4

ನೀವು ಬನ್ನಿ, ಗೆಳೆಯರನ್ನು ಕರೆತನ್ನಿ ಎಂದು ಈ ಕೆಳಗಿನ ಪತ್ರಿಕಾ ಛಾಯಾಗ್ರಹಕರು ಕೋರಿದ್ದಾರೆ.
ನೇತ್ರ ರಾಜು-ಟೈಮ್ಸ್ ಆಫ್ ಇಂಡಿಯಾ, ಎಂ.ಎ.ಶ್ರೀರಾಮ್-ದಿ ಹಿಂದೂ, ಅನುರಾಗ್ ಬಸವಣ್ಣ-ಫ್ರೀಲ್ಯಾನ್ಸ್,
ಕೆ.ಎಚ್. ಚಂದ್ರು-ಸಂಜೆ ವಾಣಿ, ಲಕ್ಷ್ಮಿನಾರಾಯಣ ಯಾದವ್-ಪ್ರಜಾನುಡಿ, ಎಸ್.ಆರ್. ಮಧುಸೂಧನ್- ಆಂದೋಲನ, ಹಂಪಾ ನಾಗರಾಜ್-ಸ್ಟಾರ್ ಆಫ್ ಮೈಸೂರ್, ನಾಗೇಶ್ ಪಾಣತಲೇ-ವಿಜಯ ಕರ್ನಾಟಕ,
ಎಸ್.ಮಂಜುನಾಥ್-ಕನ್ನಡ ಪ್ರಭ, ಎಸ್. ಉದಯ ಶಂಕರ್-ಇಂಡಿಯನ್ ಎಕ್ಸ್ ಪ್ರೆಸ್, ಪ್ರಶಾಂತ್ ಹಲಾಲೆ- ಪ್ರಜಾವಾಣಿ, ಜುಗಾರಿ ಪ್ರಕಾಶ್-ಫ್ರೀಲ್ಯಾನ್ಸ್, ನಂದನ್-ಈ ಸಂಜೆ, ಕೃಷ್ಣಾಜಿ ರಾವ್- ಫ್ರೀಲ್ಯಾನ್ಸ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+