ಮುಂಬೈಯಲ್ಲಿ ಮತ್ತೆ ಬಾಂಬ್ ಸ್ಫೋಟ: ಬೆಚ್ಚಿಬಿದ್ದ ಬಾಲಿವುಡ್

'ಮುಂಬೈಯಲ್ಲಿ ಬಾಂಬ್ ಸ್ಫೋಟ ದೇವರೇ..! ಜನರೆಲ್ಲ ಸುರಕ್ಷಿತವಾಗಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದೇನೆ' ಎಂದು ಬಿಗ್ ಬಿ ಅಮಿತಾಬ್ ಬಚ್ಚನ್ ಬರೆದುಕೊಂಡಿದ್ದಾರೆ.
'ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಭಾವಿಸಿದ್ದೇನೆ ಮನೆಯಲ್ಲೇ ಇರಿ' ಎಂದು ಅಭಿಷೇಕ್ ಬಚ್ಚನ್ ಹೇಳಿದ್ದರೆ, 'ಇಂದು ಕಸಬ್ ಬರ್ತ್ ಡೇಯಂತೆ.. ಪಟಾಕಿಗಳ ಬದಲು ಬಾಂಬ್ ಸ್ಫೋಟಿಸಿ ಅವರು ಸಂಭ್ರಮ ಹಂಚಿಕೊಂಡಿರಬೇಕು' ಎಂದು ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ಟ್ವಿಟ್ಟರ್ ಬರೆದಿದ್ದಾರೆ.
ರಿತೇಶ್ ದೇಶ್‌ಮುಖ್ ಅವರಂತೂ ಸ್ಫೋಟದಿಂದ ತಲ್ಲಣಕ್ಕೊಳಗಾಗಿದ್ದು 'ಸ್ಫೋಟದ ಸುದ್ದಿಯಿಂದ ಆಘಾತವಾಗಿದೆ. ತೊಂದರೆಗೊಳಗಾದವರಿಗಾಗಿ ಪ್ರಾರ್ಥಿಸುವೆ. ಸುರಕ್ಷಿತವಾಗಿರಿ, ಮನೆಯಲ್ಲೇ ಇರಿ' ಎಂದು ಹೇಳಿದ್ದಾರೆ. 'ಹೇಡಿಗಳು ಮತ್ತೆ ದಾಳಿ ನಡೆಸಿದ್ದಾರೆ! ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ವಿಷಾದ ವ್ಯಕ್ತಪಡಿಸುತ್ತೇನೆ' ಎಂದು ನಟ ಫರ್ಹಾನ್ ಅಖ್ತರ್ ಹೇಳಿದ್ದಾರೆ.
'ಇದೊಂದು ಹುಚ್ಚುತನ. ನಾವು ದೊಡ್ಡದಾಗಿ ಮಾತನಾಡುತ್ತೇವೆ. ಈ ಹಿಂದಿನ ಘಟನೆಗಳಿಂದ ನಾವು ಒಂದು ಪಾಠವನ್ನೂ ಕಲಿತಿಲ್ಲ' ಎಂದು ನಟ ನೀಲ್ ನಿತಿನ್ ಮುಖೇಶ್ ಹೇಳಿದ್ದಾರೆ.
'ಮುಗ್ಧ ನಾಗರಿಕರ ವಿರುದ್ಧ ಬಾಂಬ್ ದಾಳಿಯನ್ನು ತಡೆಯುವ ಬಗ್ಗೆ ಯಾರಾದರೂ ಹೇಳುತ್ತೀರಾ.? ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ' ಎಂದು ಟೆನಿಸ್ ಆಟಗಾರ ಮಹೇಶ್ ಭೂಪತಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications