ಮುಂಬೈ ಸ್ಫೋಟ : ಹಂಪಿ, ಟಿಬಿ ಡ್ಯಾಮಿಗೆ ಬಿಗಿಭದ್ರತೆ

ಈ ಕುರಿತು ವಿವರ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ, ಮೇಲ್ಕಾಣಿಸಿದ ಎಲ್ಲಾ ಸ್ಥಳಗಳಲ್ಲಿ ಸಾಮಾನ್ಯವಾಗಿ ಬಿಗಿ ಬಂದೋಬಸ್ತ್ ಜಾರಿಯಲ್ಲಿರುತ್ತದೆ. ಮುಂಬೈ ಸ್ಪೋಟದ ಹಿನ್ನೆಲೆಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ವಿಶೇಷ ಭದ್ರತಾ ವ್ಯವಸ್ಥೆ ಅಲ್ಲ ಎಂದರು.
ಬಾಂಬ್ ನಿಷ್ಕ್ರಿಯ ದಳ, ಮೆಟಲ್ ಡಿಟೆಕ್ಟರ್‌ಗಳು, ಶ್ವಾನದಳ ಹಾಗೂ ಗುಪ್ತಚರ ವಿಭಾಗದ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನೇಮಿಸಲಾಗಿದೆ. ಹಂಪಿ, ತುಂಗಭದ್ರಾ ಜಲಾಶಯಕ್ಕೆ ಹೋಗಿ - ಬರುವ ಪ್ರವಾಸಿಗರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಈ ಪ್ರದೇಶಗಳಲ್ಲಿ ಸಂಚರಿಸುವ ಪ್ರತಿ ವಾಹನದ ಸಂಖ್ಯೆ, ಚಾಲಕರ ಮಾಹಿತಿ ಇನ್ನಿತರೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದರು.
ಅಷ್ಟೇ ಅಲ್ಲ, ಶಂಕಿತ ವ್ಯಕ್ತಿಗಳ ಮೇಲೆ ತೀವ್ರ ನಿಗಾ ಇರಿಸಲಾಗುತ್ತಿದೆ. ಪ್ರವಾಸಿ ಮಂದಿರಗಳಲ್ಲಿ, ರೆಸಾರ್ಟ್‌ಗಳಲ್ಲಿ, ಅತಿಥಿಗೃಹಗಳಲ್ಲಿ ತಂಗುವ ಪ್ರವಾಸಿಗರ ಮಾಹಿತಿಯನ್ನು ತಪ್ಪದೇ ಸಂಗ್ರಹಿಸಲು ಅವುಗಳ ಸಿಬ್ಬಂದಿ - ಮಾಲೀಕರಿಗೆ ಎಚ್ಚರಿಸಲಾಗಿದೆ. ಶಂಕಿತರ ಕುರಿತು ಇಲಾಖೆಗೆ ಮಾಹಿತಿ ನೀಡಲು ಕೋರಲಾಗಿದೆ ಎಂದರು.











Click it and Unblock the Notifications