ಅತ್ಯಾಚಾರವೆಸಗಿ ಮೊಬೈಲ್ ನಲ್ಲಿ ಚಿತ್ರೀಕರಿಸಿದ ನಾಲ್ವರಿಗೆ ಗಲ್ಲು

ಸೌದಿಯ ಇಬ್ಬರು, ಯೆಮನ್ ಮತ್ತು ಸೊಮಾಲಿಯದ ಇಬ್ಬರು ಜೆಡ್ಡಾದ ಪಶ್ಚಿಮ ರೆಡ್ ಸಿ ಪೋರ್ಟ್ ಪಟ್ಟಣದಲ್ಲಿ ಈ ದುಷ್ಕೃತ್ಯವನ್ನು ಎಸಗುತ್ತಾ ಅದನ್ನು ಮೊಬೈಲ್ ಗಳಲ್ಲಿ ಚಿತ್ರೀಕರಣವನ್ನೂ ಮಾಡಿದ್ದರು. ಅದೇ ಅವರಿಗೆ ಮುಳುವಾಗಿದ್ದು, ಬಲವಾದ ಸಾಕ್ಷ್ಯವಾಗಿ ಹೊರಹೊಮ್ಮಿದೆ.
ಕಳೆದ ವಾರ ನಾಲ್ವರು ಆಗಂತುಕರು ಚಾಕು, ಪಿಕಾಸಿಗಳನ್ನು ಹಿಡಿದು ಬಾಧಿತ ಮಹಿಳೆಯ ಮನೆ ಪ್ರವೇಶಿಸಿದ್ದರು. ಅದಕ್ಕೂ ಮುನ್ನ ಮಹಿಳೆಯು ಯಾರೋ ಬಾಗಿಲು ಬಡಿಯುತ್ತಿದ್ದಾರೆ. ಹೋಗಿ ತೆರೆಯುತ್ತೇನೆ ಎಂದು ಗಂಡನಿಗೆ ಫೋನ್ ಮಾಡಿ ತಿಳಿಸಿದ್ದಳು. ಒಳ ಬಂದ ದುಷ್ಟರು ಆರು ವರ್ಷದ ಮಗಳ ಮುಂದೆ ಆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು.
ಪ್ರಾಣ ಬೆದರಿಕೆಯ ನಡುವೆಯೂ ಮಹಿಳೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದಳು. ಪೊಲೀಸರು ಒಬ್ಬನ ರೇಖಾಚಿತ್ರವನ್ನು ಬಿಡಿಸಿ, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಅವನನ್ನು ಬಂಧಿಸಿದರು. ಅವನ ಸಹಾಯದಿಂದ ಉಳಿದವರೂ ಪೊಲೀಸರ ಅತಿಥಿಗಳಾದರು. ಮೊಬೈಲ್ ಸಾಕ್ಷ್ಯದೊಂದಿಗೆ ಈಗ ಪೊಲೀಸರು ಆರೋಪಿಗಳ ವಿರುದ್ಧ ಸರಿಯಾಗಿ ಕೇಸು ಜಡಿದಿದ್ದು, ನಾಲ್ವರಿಗೂ ಗಲ್ಲು ಶಿಕ್ಷೆ ವಿಧಿಸುವಂತೆ ಕೋರ್ಟಿಗೆ ಮನವಿ ಮಾಡಿದ್ದಾರೆ.











Click it and Unblock the Notifications