ಕಿಲ್ಲರ್ ಬಿಎಂಟಿಸಿ ಚಾಲಕನ ನಿರ್ಲಕ್ಷ್ಯಕ್ಕೆ ಒಬ್ಬ ಬಲಿ
ಬೆಂಗಳೂರು
ಜು 12: ಕಿಲ್ಲರ್ ಬಿಎಂಟಿಸಿ ಮತ್ತೊಂದು ಹೆಣ ಉರುಳಿಸಿದೆ. ಬಿಎಂಟಿಸಿ ರೂಟ್ ನಂಬರ್ 171 ಬಸ್ ಹರಿದ ಪರಿಣಾಮ ಪಾದಾಚಾರಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಡಬ್ಬಲ್ ರೋಲ್ ಡ್ರೈವರ್ ವ್ಯವಸ್ಥೆಯೆ ಇದಕ್ಕೆ ನೇರ ಕಾರಣ ಎಂಬುದು ಈ ಪ್ರಕರಣದಿಂದ ಸ್ಪಷ್ಟವಾಗುತ್ತಿದೆ. id="toptextpromo">ಸಿಂಗಲ್
ಡೋರ್ ಬಸ್ ಡ್ರೈವರ್ ಸೋಮಶೇಖರ ಟಿಕೆಟ್ ವಿತರಣೆಯಲ್ಲಿ ಮಗ್ನನಾಗಿದ್ದ ಸೋಮಶೇಖರನಿಗೆ ತಿರುವಿನಲ್ಲಿ ಬರುತ್ತಿದ್ದ ಡೇವಿಡ್ ಎಂಬ ವ್ಯಕ್ತಿ ಕಾಣಿಸದ ಪರಿಣಾಮ ಅಪಘಾತ ಸಂಭವಿಸಿದೆ. ಹೊಸೂರು ರಸ್ತೆ ಬಾಶ್ ಕಂಪನಿ ಹತ್ತಿರ ನಡೆದ ಈ ದುರ್ಘಟನೆಯನ್ನು ಕಂಡ ಸಾರ್ವಜನಿಕರು ಬಸ್ ಅನ್ನು ಜಖಂಗೊಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕೋರಮಂಗಲದಿಂದ
ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದ ಬಿಎಂಟಿಸಿ ಪುಷ್ಪಕ್ ಬಸ್ ಮೂಕ ಸಾಕ್ಷಿಯಾಗಿ ನಿಂತಿದ್ದ ಪರಿಣಾಮ, ಹೊಸೂರು-ಆಡುಗೋಡಿ-ಬನ್ನೇರುಘಟ್ಟ ರಸ್ತೆ ಟ್ರಾಫಿಕ್ ಜಾಮ್ ಆಗಿತ್ತು ತಕ್ಷಣವೇ ಘಟನಾ ಸ್ಥಳದಿಂದ ಪರಾರಿಯಾಗಿದ್ದ ಚಾಲಕ, ನಂತರ ಆಡುಗೋಡಿ ಪೊಲೀಸರಿಗೆ ಶರಣಾಗಿದ್ದಾನೆ. ಮೃತಪಟ್ಟ ವ್ಯಕ್ತಿಯನ್ನು ಚೆನ್ನೈ ಮೂಲದ ಡೇವಿಡ್(27) ಎಂದು ಗುರುತಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡೇವಿಡ್ ಶವ ಇರಿಸಲಾಗಿದೆ.











Click it and Unblock the Notifications