ಸರ್ಕಾರಿ ಶಾಲೆಗಳ ಕೇಸರೀಕರಣಕ್ಕೆ ಬಿಡುವುದಿಲ್ಲ : ಕಾಂಗ್ರೆಸ್

ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಲು ಸರ್ಕಾರ ಹೊರಡಿಸಿರುವ ಸುತ್ತೋಲೆಗೆ ಆಕ್ರೋಶ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಬಿಜೆಪಿ ಸರ್ಕಾರ ಅನ್ಯ ಧರ್ಮೀಯರಿಗೆ ಅವಮಾನವಾಗುವ ರೀತಿಯಲ್ಲಿ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ,ಕೂಡಲೇ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದರು.
ನಮ್ಮ ದೇಶದಲ್ಲಿ ಅನೇಕ ಧರ್ಮ, ನಂಬಿಕೆಗಳು ಇವೆ. ಜೊತೆಗೆ ಸಂವಿಧಾನದಲ್ಲಿ ಎಲ್ಲ ಧರ್ಮಗಳ ಬಗ್ಗೆ, ಅವರ ಭಾವನೆಗಳ ಕುರಿತು ಗೌರವ ನೀಡಬೇಕು. ಶಾಲೆಗಳಲ್ಲಿ ಒಂದು ಧರ್ಮದ ಗ್ರಂಥವನ್ನು ಬೋಧಿಸುವುದು ಸರಿಯಲ್ಲ. ಬೋಧಿಸುವುದಾದರೆ ಕುರ್‌ಆನ್, ಬೈಬಲ್ ಸೇರಿದಂತೆ ಎಲ್ಲವನ್ನೂ ಬೋಧಿಸಲಿ ಎಂದು ಪರಮೇಶ್ವರ್ ಸಲಹೆ ನೀಡಿದರು.
ಒಂದು ಧರ್ಮದ ವಿರುದ್ಧ ಮತ್ತೊಂದು ಧರ್ಮವನ್ನು ಎತ್ತಿ ಕಟ್ಟಲು ಬಿಡುವುದಿಲ್ಲ. ಈ ಅಭಿಯಾನವನ್ನು ತಕ್ಷಣ ನಿಲ್ಲಿಸಬೇಕು, ಇಲ್ಲದಿದ್ದರೆ ಕಾಂಗ್ರೆಸ್ ಮುಂದಿನ ಹೆಜ್ಜೆಯನ್ನು ಇಡಲಿದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.












Click it and Unblock the Notifications