ಕೆಜಿಎಫ್ ನ್ಯಾಯಾಧೀಶರ ವಜಾ ಆಗ್ರಹಿಸಿ ವಕೀಲರ ಪ್ರತಿಭಟನೆ

KGF judge biased
ಬೆಂಗಳೂರು, ಜುಲೈ 6: ಕೆಜಿಎಫ್‌ನ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್. ಲಕ್ಷ್ಮಿನಾರಾಯಣ ಅವರು ನ್ಯಾಯ ವಿತರಣೆ ಮಾಡಲು ಲಂಚ ಪಡೆಯುತ್ತಿದ್ದಾರೆ. ಆದ್ದರಿಂದ ಅವರನ್ನು ಸೇವೆಯಿಂದ ವಜಾಗೊಳಿಸಿ, ಇಲ್ಲವೇ ವರ್ಗ ಮಾಡಿ ಎಂದು ಕೆಜಿಎಫ್ ವಕೀಲರ ಸಂಘ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದೆ.

ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಮುಖ್ಯ ನ್ಯಾಯಮೂರ್ತಿಗಳು ಹಲವಾರು ಪ್ರಕರಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಾದರೆ, ನ್ಯಾಯಾಂಗದಲ್ಲಿ ಇರುವ ಇಂತಹ ಭ್ರಷ್ಟ ನ್ಯಾಯಾಧೀಶರನ್ನು ವಜಾಗೊಳಿಸಲು ಮನಸು ಮಾಡಬೇಕಾಗಿದೆ.

ಇದೇ ಬೇಡಿಕೆಯನ್ನು ಮುಂದಿಟ್ಟುಕೊಂಡು ಇದೇ ಗುರುವಾರ (ಜುಲೈ 7) ನಗರದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸುವುದಾಗಿ ವಕೀಲರು ಪತ್ರದಲ್ಲಿ ತಿಳಿಸಿದ್ದಾರೆ. ಈ ಕುರಿತು ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ವೈ.ಎನ್. ಸದಾಶಿವ ರೆಡ್ಡಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

'ಕೋಲಾರದ ವಕೀಲ ಕೆ.ಎ. ಖಾನ್ ಹಾಗೂ ಈ ನ್ಯಾಯಾಧೀಶರು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ. ಖಾನ್ ವಾದಿಸುವ ಎಲ್ಲ ಪ್ರಕರಣಗಳಲ್ಲೂ ಅವರ ಪರವಾಗಿಯೇ ಲಕ್ಷ್ಮಿನಾರಾಯಣ ಆದೇಶ ಹೊರಡಿಸುತ್ತಾರೆ. ಅತ್ಯಂತ ಗಂಭೀರ ಪ್ರಕರಣಗಳಲ್ಲೂ ಖಾನ್ ಕಕ್ಷಿದಾರರಿಗೆ ಜಾಮೀನು ದೊರಕುತ್ತಿವೆ. ಬೇರೆ ವಕೀಲರು ವಾದಿಸುವ ಪ್ರಕರಣಗಳು ಬೆಳಗ್ಗೆ ವಜಾಗೊಂಡಿದ್ದರೆ, ಅದೇ ಪ್ರಕರಣವನ್ನು ಸಂಜೆ ಇವರು ವಾದಿಸಿ ತಮ್ಮ ಪರ ಆದೇಶ ಪಡೆದುಕೊಂಡಿರುವ ಹಲವು ಉದಾಹರಣೆಗಳಿವೆ' ಎಂದು ರೆಡ್ಡಿ ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+