ಚಿಕ್ಕಮಗಳೂರು ಕಾರು ಅಪಘಾತ: ರಾಜಿಯಾದ ವಿಮಲಾಗೌಡ
ಚಿಕ್ಕಮಗಳೂರು,
ಜುಲೈ 4: ಕಾನೂನು ರೂಪಿಸುವ ಹೊಣೆ ಹೊತ್ತವರಿಂದಲೇ ಕಾನೂನಿಗೆ ಬೆಲೆ ನೀಡದಿರುವ ಪ್ರಸಂಗ ಇದು. ಏನಾಯಿತೆಂದರೆ ವಿಧಾನ ಪರಿಷತ್ ಉಪ ಸಭಾಪತಿ ವಿಮಾಲಗೌಡರ ಕಾರು ಇನ್ನೊಂದು ವಾಹನಕ್ಕೆ ಅಪ್ಪಳಿಸಿದ್ದು ಪ್ರಕರಣವನ್ನು ರಾಜಿ ಮೂಲಕ ಶನಿವಾರ ಇತ್ಯರ್ಥ ಪಡಿಸಿಕೊಳ್ಳಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಪಘಾತದ ವೇಳೆ ಕಾರಿನಲ್ಲಿ ವಿಮಲಾಗೌಡರ ಅವರು ಪ್ರಯಾಣ ಮಾಡುತ್ತಿರಲಿಲ್ಲ ಎಂದು ತಿಳಿದುಬಂದಿದೆ. id="toptextpromo">ಕೊಪ್ಪ
ತಾಲೂಕು ಬಿಳಾಲಕೊಪ್ಪದ ಬಳಿ ಬಿಜೆಪಿ ಮುಖಂಡ ಭಾಸ್ಕರ್ ಎಂಬುವರ ಸಂಬಂಧಿ ಉಪನ್ಯಾಸಕ ಅರುಣ್‌ಕುಮಾರ್ ಕಾರಿಗೆ ವಿಮಲಾಗೌಡರ ಕಾರು ಅಪ್ಪಳಿಸಿದೆ. ಇದರಿಂದ ಅರುಣ್‌ಕುಮಾರ್ ಕಾರು ಜಖಂಗೊಂಡು ಅಂದಾಜು 25 ಸಾವಿರ ರೂ. ನಷ್ಟ ಉಂಟಾಗಿದೆ. ಅಪಘಾತದ ವೇಳೆ ಕಾರಿನಲ್ಲಿ ವಿಮಲಾಗೌಡರ ಆಪ್ತ ಸಹಾಯಕ ಹಾಗೂ ಸಂಬಂಧಿಗಳು ಇದ್ದರೆನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ವಿಮಲಾಗೌಡರ
ಅನುಪಸ್ಥಿತಿಯಲ್ಲಿ ಕಾರನ್ನು ದುರಸ್ತಿ ಪಡಿಸಿಕೊಡುವಂತೆ ಇಲ್ಲವೇ ಪರಿಹಾರ ನೀಡುವಂತೆ ಅರುಣ್‌ಕುಮಾರ್ ಒತ್ತಾಯಿಸಿದ್ದು, ಇದಕ್ಕೆ ಒಪ್ಪದೇ ಕಾರಿನ ಚಾಲಕ ಹಾಗು ಆಪ್ತ ಸಹಾಯಕ ಜಗಳಕ್ಕೆ ನಿಂತದ್ದು, ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಹಾದಿ ಬೀದಿ ರಂಪವಾಗಿ ಪರಿಸ್ಥಿತಿ ಕೈ ಮೀರುವ ಸೂಚನೆ ಅರಿತಾಗ ಬಿಜೆಪಿ ಮುಖಂಡರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ನಡೆದು ಪ್ರಕರಣಕ್ಕೆ ತೆರೆ ಎಳೆಯಲಾಗಿದೆ.











Click it and Unblock the Notifications