ಜಗನ್ನಾಥ ಯಾತ್ರೆ : ಪೊಲೀಸ್, ಅರ್ಚಕರ ಹೊಡೆದಾಟ
ಭುವನೇಶ್ವರ,
ಜು. 4 : ಜಗನ್ನಾಥ, ಬಲಭದ್ರ ಮತ್ತು ಸುಮಿತ್ರಾ ದೇವರಿರುವ ರಥಗಳ ಮೇಲೆ ಭಕ್ತರಿಗೆ ಏರಲು ಪೊಲೀಸರು ತಡೆಯೊಡ್ಡಿದ ಕಾರಣದಿಂದ ಜಗನ್ನಾಥ ಪುರಿಯಲ್ಲಿ ಮರಿ ಅರ್ಚಕರು ಮತ್ತು ಪೊಲೀಸರ ನಡುವೆ ಸೋಮವಾರ ಘರ್ಷಣೆ ನಡೆದಿದೆ. ಇಬ್ಬರ ನಡುವಿನ ಕದನದಲ್ಲಿ ಮೂವರು ಅರ್ಚಕರು ಮತ್ತು ಓರ್ವ ಪೊಲೀಸ್ ಗಾಯಗೊಂಡಿದ್ದಾರೆ. id="toptextpromo">ಜಗನ್ನಾಥನ
ದರ್ಶನ ಪಡೆಯಲು ಮತ್ತು ಜಾತ್ರೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ರಥದ ಮೇಲಿರುವ ಭಗವಂತನನ್ನು ಹತ್ತಿರದಿಂದ ನೋಡಲು ಭಕ್ತರು ಅಲ್ಯುಮಿನಿಯಂ ಏಣಿ ಏರಲು ನಾಮುಂದು ತಾಮುಂದು ಎನ್ನುತ್ತಿದ್ದರು. ರಥ ಅಲುಗಾಡಲು ಆರಂಭಿಸಿದ್ದರಿಂದ ಪೊಲೀಸರು ತಡೆಯೊಡ್ಡಿದರು. id='are-slot-1' class='oiad oi-axt oiadv'> id='top-searched-articles'>ಇದನ್ನು
ಅರ್ಚಕರು ವಿರೋಧಿಸಿದ್ದರಿಂದ ಇಬ್ಬರ ನಡುವೆ ನಡೆದ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಭಿನ್ನಾಭಿಪ್ರಾಯ ಇತ್ಯರ್ಥವಾಗುವವರೆಗೆ ಈ ಆಚರಣೆಯನ್ನು ನಿಲ್ಲಿಸಲಾಗಿತ್ತು. ಜಿಲ್ಲಾಡಳಿತ ಮತ್ತು ದೇವಸ್ಥಾನದ ಹಿರಿಯರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಭಗವಾನ್ ಜಗನ್ನಾಥನ ವಾರ್ಷಿಕ ರಥಯಾತ್ರೆ ಭಾನುವಾರದಿಂದ ಆರಂಭವಾಗಿದೆ.











Click it and Unblock the Notifications