ಕಾಲೇಜ್ ಪ್ರೊಫೆಸರ್ ಖಾತೆಗೆ ಸೈಬರ್ ಕಳ್ಳರಿಂದ ಕನ್ನ

ಏ.27ರಂದು ಆದಾಯ ತೆರಿಗೆ ಇಲಾಖೆಯಿಂದ ಒಂದು ಇಮೇಲ್ ಬಂದಿತ್ತು. ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಕೂಡಾ ತಿಳಿಸಿ. ನಿಮ್ಮ ತೆರಿಗೆ ಹಣ 36 ಸಾವಿರ ರುಗಳನ್ನು ಹಿಂತಿರುಗಿಸಲಾಗುವುದು ಎಂಬ ಇಮೇಲ್ ನಲ್ಲಿ ಹೇಳಲಾಗಿತ್ತು.
ಜೂ 23 ಅದೆ ಮೇಲ್ ಐಡಿ ಮತ್ತೊಮ್ಮೆ ಅಕೌಂಟ್ ವಿವರಗಳನ್ನು ಕೋರಿ ಇಮೇಲ್ ಬಂದಿದೆ. ಆದರೆ, ಇಮೇಲ್ ನ ಸತ್ಯಾಸತ್ಯತೆ ಬಗ್ಗೆ ಸ್ವಲ್ಪ ಕೂಡಾ ತಲೆ ಕೆಡಿಸಿಕೊಳ್ಳದ ಪ್ರೊಫೆಸರ್ ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನೀಡಿದ್ದಾರೆ.
ನಂತರ ಪ್ರೊಫೆಸರ್ ಅವರ ಖಾತೆಯಿಂದ 90 ಸಾವಿರ ರು, ಮೂರು ಪ್ರತ್ಯೇಕ ಖಾತೆಗೆ ಜಮೆಯಾಗಿದೆ. ಇದಕ್ಕಿದ್ದಂತೆ ಖಾತೆ ಬರಿದಾಗುತ್ತಿರುವುದನ್ನು ಕಂಡು ಬೆಚ್ಚಿ ಬಿದ್ದ ಹೃಷಿಕೇಶವನ್, ಸೈಬರ್ ಕ್ರೈಂ ಪೊಲೀಸರ ಮೊರೆ ಹೊಕ್ಕಿದ್ದಾರೆ.












Click it and Unblock the Notifications