ತೆಲಂಗಾಣ: ಆಂಧ್ರ ಸರ್ಕಾರ ಪತನಕ್ಕೆ ನಾಳೆ ಮಹೂರ್ತ

telangana
ಹೈದರಾಬಾದ್‌, ಜುಲೈ 3: ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆಗೆ ಒತ್ತಡ ತೀವ್ರಗೊಳಿಸಲು ನಿರ್ಧರಿಸಿರುವ ಆಂಧ್ರ ಪ್ರದೇಶದ ಕಾಂಗ್ರೆಸ್‌ ನಾಯಕರು, ಜುಲೈ 4ರಂದು ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. ತೆಲಂಗಾಣ ಪ್ರಾಂತದ ಎಲ್ಲಾ ಕಾಂಗ್ರೆಸ್‌ ಶಾಸಕರು, ಸಂಸದರು, ಸಚಿವರು ಮತ್ತು ವಿಧಾನಪರಿಷತ್‌ ಸದಸ್ಯರು ರಾಜೀನಾಮೆ ನೀಡಲಿದ್ದಾರೆ ಎಂದು ಆಂಧ್ರಪ್ರದೇಶದ ಪಂಚಾಯತ್‌ ರಾಜ್‌ ಸಚಿವ ಕೆ. ಜನಾರೆಡ್ಡಿ ತಿಳಿಸಿದ್ದಾರೆ.

ತೆಲಂಗಾಣ ಶಾಸಕರ ಈ ನಿರ್ಧಾರದಿಂದ ಎನ್‌. ಕಿರಣ್‌ ಕುಮಾರ್ ರೆಡ್ಡಿ ಅವರ ಕಾಂಗ್ರೆಸ್‌ ಸರ್ಕಾರ ಪತನಗೊಳ್ಳುವ ಸಾಧ್ಯತೆಯಿದೆ. ತೆಲಂಗಾಣದ ಜನರು ನಾವು ರಾಜೀನಾಮೆ ನೀಡಬೇಕೆಂದು ಬಯಸುತ್ತಿದ್ದಾರೆ.

ಪ್ರತ್ಯೇಕ ರಾಜ್ಯ ಸ್ಥಾಪನೆಯಲ್ಲಾಗುತ್ತಿರುವ ವಿಳಂಬಕ್ಕೆ ನಾವು ಸರಿಯಾಗಿ ಒತ್ತಡ ಹೇರುತ್ತಿಲ್ಲದೇ ಇರುವುದು ಕಾರಣ ಎಂಬ ಭಾವನೆಯಿದೆ. ನಾವು ಅಧಿಕಾರಕ್ಕೆ ಅಂಟಿಕೊಂಡವರಲ್ಲ ಎಂಬುದನ್ನು ಸಾಬೀತುಪಡಿಸುವ ಸಮಯ ಬಂದಿದೆ. ಜುಲೈ 4ರಂದು ಸಾಮೂಹಿಕ ರಾಜೀನಾಮೆ ನೀಡುತ್ತೇವೆ. ಆದರೆ ಕಾಂಗ್ರೆಸ್‌ನಲ್ಲೇ ಇದ್ದು ತೆಲಂಗಾಣ ಸ್ಥಾಪನೆಗೆ ಶ್ರಮಿಸುತ್ತೇವೆ ಎಂದು ಜನಾರೆಡ್ಡಿ ಹೇಳಿದ್ದಾರೆ.

2009ರ ಡಿಸೆಂಬರ್ 9ರಂದೇ ಪ್ರತ್ಯೇಕ ತೆಲಂಗಾಣ ಸ್ಥಾಪನೆಗೆ ಕೇಂದ್ರ ಸರ್ಕಾರ ಒಪ್ಪಿದ್ದರೂ ಆ ಬಗ್ಗೆ ಇನ್ನೂ ಕ್ರಮ ಕೈಗೊಳ್ಳದೇ ಇರುವುದರ ಬಗ್ಗೆ ತೆಲಂಗಾಣ ಪ್ರಾಂತದ ನಾಯಕರಿಗೆ ಅಸಮಾಧಾನವಿದೆ. ಕೆಲ ತಿಂಗಳ ಹಿಂದೆ ಹೈಕಮಾಂಡನ್ನು ಭೇಟಿ ಮಾಡಿದ್ದ ಅವರು ಜೂನ್‌ ಅಂತ್ಯದ ಗಡುವು ನೀಡಿದ್ದರು.

9 ಸಂಸದರೂ ರಾಜೀನಾಮೆ: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಸಂಬಂಧ ಕೇಂದ್ರದ ಮೇಲೆ ಒತ್ತಡ ತರಲು ತೆಲಂಗಾಣ ಪರ 9 ಕಾಂಗ್ರೆಸ್‌ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಹಿರಿಯ ಕಾಂಗ್ರೆಸ್‌ ಮುಖಂಡ ಕೆ.ಕೇಶವ್‌ ರಾವ್‌ ಸೇರಿದಂತೆ ಇತರ ಎಂಟು ಮಂದಿ ಸಂಸದರು, ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಮತ್ತು ರಾಜ್ಯಸಭಾಧ್ಯಕ್ಷ ಹಮೀದ್‌ ಅನ್ಸಾರಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಂಧ್ರ ವಿಧಾನಸಭೆ ಬಲ - 294
ಕಾಂಗ್ರೆಸ್‌ನ ಹಾಲಿ ಬಲ - 164
ತೆಲಂಗಾಣ ಕಾಂಗ್ರೆಸ್‌ ಶಾಸಕರು - 50
ಸರ್ಕಾರ ರಚನೆಗೆ ಬೇಕಿರುವ ಬಲ - 148

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+