ತಿರುಪತಿ ತಿಮ್ಮಪ್ಪನನ್ನು ಹಿಮ್ಮೆಟ್ಟಿದ ಅನಂತ ಪದ್ಮನಾಭ ಸ್ವಾಮಿ

Padmanabhaswamy Temple
ಕೇರಳ, ಜುಲೈ 2: ಜಗತ್ತಿನ ಶ್ರೀಮಂತ ದೇಗುಳ ತಿರುಪತಿಯನ್ನು ಕೇವಲ ಒಂದೇ ದಿನದಲ್ಲಿ ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ ಹಿಂದಿಕ್ಕಿದೆ. ಅಲ್ಲಿ ಪತ್ತೆಯಾದ ಭಾರಿ ನಿಧಿ ಇದಕ್ಕೆ ಕಾರಣ. ಖಜಾನೆಗಳಲ್ಲಿ ನಿಧಿ ಶೋಧ ಮುಗಿಯಲು ಇನ್ನಷ್ಟು ದಿನ ಹಿಡಿಯುವ ನಿರೀಕ್ಷೆಯಿದ್ದು "ಅನಂತ" ನಿಧಿ ಪತ್ತೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಚಿನ್ನದ ಸಾಗರವೇ ಕಂಡುಬಂದಿದೆ.

ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಸರ್ಪಗಾವಲು ಹಾಕಲಾಗಿದೆ. ಗನ್ ಧಾರಿ ಭದ್ರತಾ ಸಿಬ್ಬಂದಿಗಳು ಮತ್ತು ಕ್ಯಾಮರಾಗಳಿಂದ ಬಿಗಿಭದ್ರತೆ ಒದಗಿಸಲಾಗಿದೆ. ಸುಪ್ರಿಂ ಕೋರ್ಟ್ ನೇಮಿಸಿದ 7 ಜನರ ತಂಡವು ಇನ್ನಷ್ಟು ನಿಧಿಯ ಅನ್ವೇಷಣೆಯಲ್ಲಿ ತೊಡಗಿದೆ.

ಅತಿ ಪುರಾತನ ದೇವಸ್ಥಾನಗಳಲ್ಲಿ ಒಂದೆನಿಸಿರುವ ಕೇರಳದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಸಾವಿರಾರು ಕೋಟಿ ರು. ಮೌಲ್ಯದ ನಿಧಿ ಪತ್ತೆಯಾಗಿರುವುದು ಕೋಟಿ ಕೋಟಿ ಭಕ್ತಾದಿಗಳನ್ನು ಚಕಿತಗೊಳಿಸಿದೆ. ಪುರಾತತ್ವ ಪಂಡಿತರಿಗೆ ಶೋಧಿಸಲು ಹೊಸ ವಿಷಯ ಸಿಕ್ಕಂತಾಗಿದೆ.

ಅಚ್ಚರಿಯ ವಿಷಯವೆಂದರೆ ಇಲ್ಲಿ ಆರು ಬೃಹತ್ ಕೋಣೆಗಳಲ್ಲಿ ನಿಧಿ ಪತ್ತೆಯಾಗಿದೆ. ಇದರಲ್ಲಿ ಎರಡು ಕೋಣೆಯನ್ನು ಕಳೆದ 150 ವರ್ಷಗಳಿಂದ ತೆರೆದಿರಲಿಲ್ಲ. ಕೃತಕ ಉಸಿರಾಟ ಸಾಧನಗಳ ನೆರವಿನಿಂದ ಭದ್ರವಾದ ಕೋಣೆಯಲ್ಲಿ ನಿನ್ನೆ ನಿಧಿ ಶೋಧನೆ ಆರಂಭಿಸಲಾಗಿತ್ತು.

ಇಲ್ಲಿ ಸಾವಿರಾರು ವರ್ಷ ಹಳೆಯದಾದ ಬಂಗಾರದ ಪಟ್ಟಿ, ಸರ, ನಾಣ್ಯಗಳು, ಹರಳು, ವಜ್ರ, ಕಿರೀಟಗಳು ಪತ್ತೆಯಾಗಿತ್ತು. ಒಟ್ಟಾರೆ 50 ಸಾವಿರ ಕೋಟಿ ರು. ಮೌಲ್ಯಕ್ಕಿಂತ ಹೆಚ್ಚು ಬೆಳೆಬಾಳುವ ನಿಧಿ ಪತ್ತೆಯಾಗಿದೆ ಎನ್ನಲಾಗಿದೆ. ಈಗ ಪತ್ತೆಯಾಗಿರುವುದು ಶೇ 30ರಷ್ಟು ಎಂದು ಹಲವು ವರದಿಗಳು ಹೇಳಿವೆ. ಮಾಧ್ಯಮಗಳಲ್ಲಿ ವರದಿಯಾದಕ್ಕಿಂತ ಹಲವು ಪಟ್ಟು ಹೆಚ್ಚು ಸಂಪತ್ತು ಇರುವ ಸಾಧ್ಯತೆಯಿದೆ ಎಂದು ಶೋಧ ತಂಡದ ಸುಂದರರಾಜನ್ ಹೇಳಿದ್ದಾರೆ.

ಒಳಗಡೆ ಆಮ್ಲಜನಕದ ಕೊರತೆ ಇದ್ದರಿಂದ ಆ ಎರಡು ಕೋಣೆಗಳ ಬಾಗಿಲು ತೆರೆಯಲಾಗಿಲ್ಲ ಎಂದು ಸುಂದರರಾಜನ್ ಹೇಳಿದ್ದಾರೆ. ತಿರುವನಂತಪುರದ ರಾಜಮನೆತನವೊಂದು ಈ ದೇಗುಲವನ್ನು ಪುರಾತನ ಕಾಲದಲ್ಲಿ ನೋಡಿಕೊಳ್ಳುತ್ತಿತ್ತು. ನಿವೃತ್ತ ನ್ಯಾಯಾಧೀಶ ಎಂಎನ್ ಕೃಷ್ಣನ್ ನೇತೃತ್ವದಲ್ಲಿ 7 ಜನರ ತಂಡವು ನಿಧಿ ಶೋಧನೆ ನಡೆಸುತ್ತಿದೆ. ನಿಧಿ ಶೋಧನೆ ಪ್ರಕ್ರಿಯೆ ಇನ್ನೂ ಕೆಲವು ದಿನ ಮುಂದುವರೆಯುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+