ದಟ್ಸ್ ಕನ್ನಡ ಫಲಶ್ರುತಿ : ನಾಯಂಡಹಳ್ಳಿ ರಸ್ತೆ ಸಂಚಾರಿಗಳು ಸುರಕ್ಷಿತ

ಇದು ದಟ್ಸ್ ಕನ್ನಡ ಫಲಶ್ರುತಿ. ಈ ರೀತಿಯಲ್ಲಿ ರಸ್ತೆ ಸಂಚಾರಿಗಳಿಗೆ ಅಪಾಯ ಕಾದಿದೆಯೆಂದು ಫೋಟೋ ತೆಗೆದು, ಲೇಖನ ಬರೆದು ಪ್ರಕಟಿಸಲಾಗಿತ್ತು. ಅದನ್ನು ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರಿಗೂ ತಲುಪಿಸಲಾಗಿತ್ತು. ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಈ ರಸ್ತೆಯಲ್ಲಿ ಇನ್ನು ಅಲ್ಪಮಟ್ಟಿಗಾದರೂ ನಿರಾಳವಾಗಿ ಸಂಚರಿಸಬಹುದು.
ಇಂತಹ ಯಾವುದೇ ರೀತಿಯ ತೊಂದರೆ ಕಂಡುಬಂದಲ್ಲಿ ಪೊಲೀಸರಿಗೆ ತಿಳಿಸುವ ಜವಾಬ್ದಾರಿ ನಾಗರಿಕರದ್ದು ಎಂದು ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಕೆಲ ದಿನಗಳ ಹಿಂದೆ ದಟ್ಸ್ ಕನ್ನಡಕ್ಕೆ ನೀಡಲಾಗಿದ್ದ ಸಂದರ್ಶನದಲ್ಲಿ ಹೇಳಿದ್ದರು. ಈ ಕರೆಗೆ ಸ್ಪಂದಿಸುವ ಜವಾಬ್ದಾರಿ ಇನ್ನು ನಾಗರಿಕರದ್ದು. ಬೆಂಗಳೂರು ಪೊಲೀಸರ ಈಮೇಲ್ : [email protected]
ಪೊಲೀಸ್ ಅಧಿಕಾರಿಗಳೊಂದಿಗೆ ನಾವು ಕೂಡ ಕೈಜೋಡಿಸಿದರೆ ನಮ್ಮ ಬೆಂಗಳೂರನ್ನು ಇನ್ನಷ್ಟು ಸುಂದರವಾಗಿಸಬಹುದು. ಇಂತಹ ತೊಂದರೆಗಳು ಕಂಡುಬಂದಲ್ಲಿ ದಟ್ಸ್ ಕನ್ನಡಕ್ಕೇ ನೇರವಾಗಿ ಬರೆಯಿರಿ. ಆ ಲೇಖನವನ್ನು ಪ್ರಕಟಿಸಿ, ಆಯುಕ್ತರಿಗೆ ತಲುಪಿಸುವ ಜವಾಬ್ದಾರಿ ದಟ್ಸ್ ಕನ್ನಡದ್ದು. ಬೆಂಗಳೂರು ಪೊಲೀಸರಿಗೊಂದು ಥ್ಯಾಂಕ್ಸ್.












Click it and Unblock the Notifications