• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ರಾಫಿಕ್ ಸಮಸ್ಯೆ ಜಾಗೃತಿ ಜಾಹೀರಾತು ಕನ್ನಡದಲ್ಲಿರಲಿ

By * ಅರುಣ್ ಜಾವಗಲ್
|

ಬೆಂಗಳೂರಿನ ಟ್ರಾಫಿಕ್ ನಿಯಂತ್ರಿಸುವಲ್ಲಿ ದೇಶದ ಹಲವಾರು ನಗರಗಳ ಪೋಲೀಸರಿಗೆ ಹೋಲಿಸಿದರೆ ನಮ್ಮ ಪೋಲೀಸರು ಬಹಳ ಮುಂದಿದ್ದಾರೆ. ತಂತ್ರಜ್ಞಾನ ಬಳಕೆ ಮೂಲಕ ಟ್ರಾಫಿಕ್ ನಿಯಂತ್ರಣದಲ್ಲಿ ದೇಶಕ್ಕೆ ಮಾದರಿಯಾಗಿದ್ದಾರೆ ಎನ್ನುವುದು ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ಪಡುವಂತಹದ್ದು.

ಆದ್ರೆ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಣ ಮಾಡುವಲ್ಲಿ ಸಾರ್ವಜನಿಕರು ಪೋಲೀಸರಿಗೆ ಸರಿಯಾಗಿ ಸಹಕರಿಸಿಲ್ಲ ಎಂದು ಬೆಂಗಳೂರಿನ ಪೋಲೀಸ್ ಕಮೀಷನರ್ ಜ್ಯೋತಿ ಪ್ರಕಾಶ್ ಮಿರ್ಜಿಯವರು ನಗರದ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪೋಲೀಸಿನವರಷ್ಟೇ ಸಾರ್ವಜನಿಕರ ಪಾತ್ರವೂ ಇದೆ. ಟ್ರಾಫಿಕ್ ಸಮಸ್ಯೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅತ್ಯಗತ್ಯ. ಈ ಜಾಗೃತಿ ಕೆಲಸವನ್ನು ಪೋಲೀಸಿನವರ ಮಾಡುತ್ತಿಲ್ಲವೆಂದೇನಿಲ್ಲ. ಸಾರ್ವಜನಿಕರಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸೋ ಕೆಲ್ಸನೂ ಸಹ ಪೋಲೀಸಿನವರು ಮಾಡುತ್ತಿದ್ದಾರೆ. ಆದರೆ ಇದು ಪರಿಣಾಮಕಾರಿಯಾಗಿಲ್ಲ ಅನ್ನೊದು ನನ್ನ ಅನಿಸಿಕೆ.

ಟ್ರಾಫಿಕ್ ಸಮಸ್ಯೆಯ ಬಗ್ಗೆ ಜಾಗೃತಿ ಕೆಲ್ಸದಲ್ಲಿ ಭಾಷೆ ಅತ್ಯಂತ ಮುಖ್ಯ. ಜನರಿಗೆ ಅರ್ಥ ಆಗೋ ಬಾಷೆಲಿ ಈ ಕೆಲ್ಸ ನಡೆದ್ರೆ ಪರಿಣಾಮಕಾರಿಯಾಗಿರುತ್ತೆ. ಬೆಂಗಳೂರಿನ ಬಹುಸಂಖ್ಯಾತ ಜನರ ಭಾಷೆ ಕನ್ನಡದಲ್ಲಿ ಜಾಗೃತಿ ಕಾರ್ಯಕ್ರಮ ನಡೆದ್ರೆ ಜಾಗೃತಿ ಸಂದೇಶ ಜನರಿಗೆ ತಲುಪುತ್ತೆ. ವಿಷಾದದ ಸಂಗತಿಯೆಂದರೆ, ಪೋಲೀಸಿನವರು ಸಾರ್ವಜನಿಕರನ್ನು ಜಾಗೃತಿ ಮಾಡೋ ಕಾರ್ಯದಲ್ಲಿ ವಲಸಿಗರನ್ನ ಮಾತ್ರ ಗಣನೆಗೆ ತೆಗೆದುಕೊಂಡು ಬಹುಸಂಖ್ಯಾತ ಕನ್ನಡಿಗರನ್ನ ಮರೆತಿರುವುದು ದುರದ್ರುಶ್ಟವೇ.

ಟ್ರಾಫಿಕ್ ಸಮಸ್ಯೆಯ ಬಗ್ಗೆ ನಗರದಲ್ಲಿ ಹಲವಾರು ಹೋರ್ಡಿಂಗ್ ಗಳನ್ನ ನೋಡಬಹುದು ಈ ಹೋರ್ಡಿಂಗ್ ಗಳನ್ನ ಪೋಲೀಸ್ ಇಲಾಖೆ ಜನರಿಗೆ ಜಾಗೃತಿ ಮಾಡೊಕ್ಕೆ ಅಂತಾನೇ ಹಾಕಿರೋದು. ಆದ್ರೆ ಹೆಚ್ಚಿನ ಹೋರ್ಡಿಂಗ್ ಗಳಲ್ಲಿ ಬಹುಸಂಖ್ಯಾತ ಬೆಂಗಳೂರಿಗರಿಗೆ ಅರ್ಥವಾಗದ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಇದೆ. ಇನ್ನು ಇತ್ತೀಚೆಗೆ ಹಲವಾರು ಕಡೆ ಅಳವಡಿಸಲಾಗಿರೋ ಎಲೆಕ್ಟ್ರಾನಿಕ್ ಡಿಸ್ಪ್ಲೆ ಕಡೆ ನೋಡಿದ್ರೆ, ಅಲ್ಲೂ ಸಹ ಇದೆ ರೀತಿ ಜನರಿಗೆ ಗೊತ್ತಿಲ್ಲದ ಭಾಷೆಯಲ್ಲಿ ಜಾಗೃತಿ ಮಾಡೊ ಪ್ರಯತ್ನ ಮಾಡ್ತಿರೋದು ಎದ್ದು ಕಾಣಿಸುತ್ತಿದೆ.

ಇನ್ನು ಟ್ರಾಫಿಕ್ ಪೋಲೀಸಿನವರು ಕಳೆದ ಕೆಲವು ತಿಂಗಳ ಹಿಂದೆ ಜನರಲ್ಲಿ ಟ್ರಾಫಿಕ್ ಸಮಸ್ಯೆಯ ಬಗ್ಗೆ ಜಾಗೃತಿ ಮಾಡೊಕ್ಕೆ ಅಂತ ಒಂದು ವೀಡಿಯೋ ಮಾಡಿ ಬೆಂಗಳೂರಿನ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಮೊದಲು ಪ್ರದರ್ಶನ ಮಾಡೊ ವ್ಯವಸ್ಥೆ ಮಾಡಿದ್ದಾರೆ. ಇದು ಒಂದು ಉತ್ತಮ ನಡೆಯೇ, ಆದ್ರೆ ಈ ವೀಡಿಯೋ ನಲ್ಲಿ ಜಾಗೃತಿಗೆ ಅಂತ ಬಳಸಿರೋದು ಬೆಂಗಳೂರಿನ ಜನರಿಗೆ ಅರ್ಥವಾಗದಿರೋ ಹಿಂದಿ ಭಾಷೆನ! ಜಾಗೃತಿ ಮಾಡೊವಾಗ ಬಳಸಬೇಕಾದ್ದು ಜನರಿಗೆ ಗೊತ್ತಿರೋ ಕನ್ನಡ ಭಾಷೆನ ಹೊರೆತು, ಜನರಿಗೆ ತಿಳಿಯದ ಹಿಂದಿ ಭಾಷೆಯನ್ನಲ್ಲ ಅಲ್ವ?

ನಿಜವಾಗಿಯೂ ಪೋಲೀಸ್ ಇಲಾಖೆ ತನ್ನ ಜಾಗೃತಿ ಮೂಡಿಸೋ ಕಾರ್ಯದಲ್ಲಿ ಕನ್ನಡವನ್ನ ಬಳಸಿದ್ರೆ, ಇಂದಿಗಿಂತ ಹೆಚ್ಹು ಪರಿಣಾಮಕಾರಿಯಾಗಿ ಜನರನ್ನ ಜಾಗೃತರನ್ನಾಗಿ ಮಾಡೊಕ್ಕೆ ಸಾಧ್ಯ ಅಲ್ವ?

ಟ್ರಾಫಿಕ್ ಸಮಸ್ಯೆಯನ್ನ ಜನರಲ್ಲಿ ಜಾಗ್ರುತಿ ಮಾಡೊದ್ರಿಂದ ಮಾತ್ರ ಕಡಿಮೆ ಮಾಡಬಹುದು, ಜಾಗೃತಿಗೆ ಬಳಸೋ ಭಾಷೆ ಕೂಡ ಜನರಿಗೆ ಅರ್ಥ ಆಗೋ ಭಾಷೆ, ಕನ್ನಡ ಆಗಿರಬೇಕು ಅಲ್ವ? ಏನಂತೀರ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
: Traffic Awareness messages and hoarding display should be in Kannada language so that it can reach all. This response to the Police commissioner Jyothi Prakash Mirji's statement that Public not co operating in solving Traffic chaos and we need new technology to curb traffic menace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more